Covid : ಕೊರೊನಾ ಹೊಸ ಅಲೆಗೆ ಈ ರಾಜ್ಯದಲ್ಲಿ ಮೊದಲ ಬಲಿ!!

Share the Article

 

Covid : ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಕೊರೋನಾ ಹೊಸ ಅಲೆ ತಾಂಡವ ಆಡಲು ಶುರು ಮಾಡಿದೆ. ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಕೋವಿಡ್ ಟೆಸ್ಟಿಂಗ್ ಸೆಂಟರ್ ಗಳನ್ನು ಮತ್ತೆ ಓಪನ್ ಮಾಡಲು ಆದೇಶಿಸಿದೆ. ಜೊತೆಗೆ ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮುಂಬೈ, ಪುಣೆ ಮತ್ತು ಥಾಣೆಯಂತಹ ನಗರಗಳಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇದರ ಮಧ್ಯ ಥಾಣೆ ಜಿಲ್ಲೆಯಲ್ಲಿ, 21 ವರ್ಷದ ಯುವಕ ಕೊರೊನಾದಿಂದ ಸಾವನ್ನಪ್ಪಿದ್ದಾನೆ.

 

ಹೌದು, ಥಾಣೆಯಲ್ಲಿ 21 ವರ್ಷದ ಯುವಕ ಕೊರೊನಾಗೆ ಮೊದಲ ಬಲಿಯಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಕಲ್ವಾ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ 21 ವರ್ಷದ ಯುವಕನೊಬ್ಬ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

Comments are closed.