CET ಯಲ್ಲಿ ಜನಿವಾರ ತೆಗೆಸಿದ ವಿದ್ಯಾರ್ಥಿಯ ರ‍್ಯಾಂಕ್ ಎಷ್ಟು ಗೊತ್ತಾ?

Share the Article

CET: ಶನಿವಾರ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ರಾಂಕ್ ಬಂದ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಗಮನ ಸೆಳೆದಿದ್ದು ಬೀದರ್ ನಲ್ಲಿ ಜನಿವಾರ ತೆಗೆಸಿದ ವಿದ್ಯಾರ್ಥಿಯ ಫಲಿತಾಂಶ ಏನಾಗಿದೆ ಎಂಬುದು.

ಹೌದು, ಸಿಇಟಿ ಫಲಿತಾಂಶ ಬೆನ್ನಲ್ಲೇ ಈ ಬಾರಿ ಭಾರೀ ಸದ್ದು ಮಾಡಿದ್ದ ಜನಿವಾರ ತೆಗೆಸಿದ ಬ್ರಾಹ್ಮಣ ವಿದ್ಯಾರ್ಥಿ ಸುಚಿವೃತ ಕುಲಕರ್ಣಿಯ ಫಲಿತಾಂಶ ಏನಾಗಿದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಇದೀಗ ಉತ್ತರ ಕೂಡ ಸಿಕ್ಕಿದೆ.

ಅಂದಹಾಗೆ ಫಲಿತಾಂಶ ಪ್ರಕಟಣೆ ವೇಳೆಸುಚಿವೃತ ಕುಲಕರ್ಣಿ ಫಲಿತಾಂಶವನ್ನೂ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಈ ವಿದ್ಯಾರ್ಥಿಗೆ 2 ಲಕ್ಷದ 6 ಸಾವಿರ ರಾಂಕ್ ಬಂದಿದೆ. ಆತನ ಪೋಷಕರಿಂದ ಲಿಖಿತ ರೂಪದಲ್ಲಿ ಅಭಿಪ್ರಾಯ ಪಡೆದಿದ್ದು ಅದರ ಅನ್ವಯ ಸರಾಸರಿ ಅಂಕ ಹಂಚಿಕೆ ಮಾಡಿ ರಾಂಕ್ ನೀಡಲಾಗಿದೆ ಎಂದಿದ್ದಾರೆ.

ಇನ್ನು ಈ ಘಟನೆ ನಡೆದಿದ್ದು ಉದ್ದೇಶಪೂರ್ವಕವಾಗಿ ಅಲ್ಲ. ಸಿಬ್ಬಂದಿಯ ಎಡವಟ್ಟಿನಿಂದ ಈ ರೀತಿ ಆಗಿದೆ. ಆ ವಿದ್ಯಾರ್ಥಿಗೆ ನ್ಯಾಯ ಒದಗಿಸಿದ್ದೇವೆ. ಯಾವುದೇ ಅನ್ಯಾಯವಾಗದಂತೆ ಸರಾಸರಿ ಅಂಕಗಳ ಆಧಾರದಲ್ಲಿ ರಾಂಕ್ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Comments are closed.