Covid: ಬೆಂಗಳೂರಿನಲ್ಲಿ 9 ತಿಂಗಳ ಮಗುವಿಗೆ ಕೋವಿಡ್ 19

Share the Article

Covid:  ಮಕ್ಕಳಿಗೆ ಕೋವಿಡ್ ತಗಲುವುದು ತೀರಾ ಅಪರೂಪ ಹೀಗಿರುವಾಗ ಬೆಂಗಳೂರಿನಲ್ಲಿ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ಹರಡಿರುವುದು ಅಚ್ಚರಿ ಉಂಟು ಮಾಡಿದೆ. ಕಳೆದ ವಾರ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇದಕ್ಕೆ ತಂದೆ-ತಾಯಿಗೆ ಯಾವುದೇ ಲಕ್ಷಣಗಳು ಇಲ್ಲದಿರುವುದು ವೈದ್ಯರನ್ನೇ ಅಚ್ಚರಿಗೊಳಿಸಿದೆ.

ಈ ಪ್ರಕರಣದ ವಿಶೇಷತೆ ಏನೆಂದರೆ, ಮಗುವಿನ ತಂದೆ ಹಾಗೂ ತಾಯಿಗೆ ಯಾವುದೇ ಜ್ವರ, ಕೆಮ್ಮು ಅಥವಾ ನೆಗಡಿ ಇಲ್ಲದೆ, ಯಾವುದೇ ಪ್ರಯಾಣ ಮಾಡದಿದ್ದರೂ ಕೂಡ ಲ್ ಮಗು ಸೋಂಕಿಗೆ ಒಳಗಾಗಿದೆ. ವೈದ್ಯರ ಪ್ರಾಥಮಿಕ ಶಂಕೆ, ಮಗುವನ್ನು ಆಟ ಆಡಿಸಲು ಬಂದ ಅಕ್ಕಪಕ್ಕದ ಮನೆಯ ಮಕ್ಕಳಿಂದ ಸೋಂಕು ಹರಿದಿರಬಹುದು ಎಂದು ವಾಣಿ ವಿಲಾಸ ಆಸ್ಪತ್ರೆಯ ಪಿಡಿಯಾಟ್ರಿಕ್ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ಸಹನಾ ದೇವದಾಸ್ ಹೇಳಿದ್ದಾರೆ

ಮೇ 13 ರಂದು ಮಗುವಿಗೆ ಮೊದಲ ಬಾರಿ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವಾಗಿ ಪೀಡಿಯಾಟ್ರಿಕ್ ತಜ್ಞರನ್ನು ಸಂಪರ್ಕಿಸಿದ ಕುಟುಂಬವು ಮೊದಲು ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಾಣಿ ವಿಲಾಸ ಆಸ್ಪತ್ರೆಗೆ ರವಾನೆಯಾಗಿದ್ದು, ಈ ವೇಳೆ ಮಗುವಿಗೆ ಐಸೋಲೇಷನ್ ನಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಮಕ್ಕಳಿಗೆ ಸೋಂಕು ಬಂದರೆ, ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಅತೀ ಅವಶ್ಯಕ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.