Coronavirus: ರಾಜ್ಯದಲ್ಲಿ ಮತ್ತೆ ಕೋವಿಡ್ ಟೆಸ್ಟಿಂಗ್ ಕೇಂದ್ರಗಳು ಓಪನ್

Share the Article

Corona Virus: ಬೆಂಗಳೂರು: ನಿನ್ನೆಯವರೆಗೂ 35 ಕೋವಿಡ್ ಕೇಸ್ ದಾಖಲಾಗಿದ್ದು, ಹೆಚ್ಚುತ್ತಿರುವ ಪ್ರಕರಣಗಳ ಭೀತಿಯಿಂದ ಆಯ್ದಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಕೋವಿಡ್ ಬಂದವರಿಗೆ ಮೈಲ್ಡ್ ಸಿಂಟಮ್ಸ್ ಇರುತ್ತದೆ ಹಾಗೂ ಗಂಭೀರವಾದ ಸಮಸ್ಯೆಗಳು ಏನೂ ಇಲ್ಲ. ಪ್ರಕರಣಗಳು ತಮ್ಮ‌ಮನೆಯಲ್ಲೇ ಉಳಿಯಬೇಕು. ಎಲ್ಲರೂ ಮಾಸ್ಕ್ ಧರಿಸಬೇಕು ಎಂದಿದ್ದಾರೆ. ಅನಾವಶ್ಯಕವಾಗಿ ಸದ್ಯಕ್ಕೆ ಭಯ ಬೇಡ ಎಂದಿದ್ದಾರೆ.

ನಾವು ಟೆಸ್ಟಿಂಗ್ ಕಿಟ್ ತೆಗೆದಿರಿಸಿದ್ದೇವೆ ಮತ್ತು ಟೆಸ್ಟ್ ಮಾಡಲೇಬೇಕಾದ ಟೆಸ್ಟ್ ಮಾಡುತ್ತೇವೆ. ಜ್ವರ ಬಂದವರು ತಮ್ಮ‌ಮನೆಯಲ್ಲೇ ಕಡಿಮೆಯಾಗುವವರೆಗೂ ಹೊರಬರಬಾರದು ಎಂದು ಸೂಚಿಸಿದ್ದು, ಪ್ರಕರಣಗಳ ಏರಿಕೆಯನ್ನು ಗಮನಿಸಿ, ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೊತೆಗೆ ಎಂಟು ಆರ್ ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ ಗಳನ್ನು ಮತ್ತೆ ಓಪನ್ ಮಾಡಲು ಇಲಾಖೆ ಮುಂದಾಗಿರುತ್ತದೆ

Comments are closed.