Belthangady: ಬೆಳ್ತಂಗಡಿ: ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 40 ಕೋಟಿ ಹಗರಣ: ಪ್ರಕರಣ ದಾಖಲು

Share the Article

 

Belthangady: ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ(ರಿ) ಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣವನ್ನು ವಾಪಸ್ ನೀಡದೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು. ಈ ಬಗ್ಗೆ 2021 ರಿಂದ 2024 ರವರೆಗೆ ಸೊಸೈಟಿಯಲ್ಲಿ ಜವಬ್ದಾರಿ ವಹಿಸಿಕೊಂಡಿದ್ದ 14 ಜನರ ಮೇಲೆ ಬೆಳ್ತಂಗಡಿ (Belthangady)ಪೊಲೀಸ್‌ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

 

ಬೆಳ್ತಂಗಡಿ ನಗರದ ಜ್ಯೂನಿಯ‌ರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆ‌ರ್.ನಾಯಕ್ ಕಾಂಪೌಂಡ್ ನಲ್ಲಿ ಸುಮಾರು 25 ವರ್ಷಗಳಿಂದ ಏಕೈಕ ಬ್ರಾಂಚ್ ಆಗಿ ಕಾರ್ಯಾಚರಿಸುತ್ತಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ(ರಿ) ನಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣ ವಾಪಸ್‌ ಗ್ರಾಹಕರಿಗೆ ನೀಡದೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಳೆದ ವರ್ಷ ಗ್ರಾಹಕರು ಒಟ್ಟಾಗಿ ಸೇರಿ ದಾಖಲೆಗಳನ್ನು ತೆಗೆದು ಡಿಸಿ, ಎಸ್ಪಿ, ಸಹಕಾರ ಸಂಘ, ಗ್ರಾಹಕರ ವೇದಿಕೆ ಸೇರಿದಂತೆ ಎಲ್ಲಾ ಕಡೆ ದೂರು ನೀಡಿದ್ದರು. ಈ ಬಗ್ಗೆ ಡಿಸಿ ಕಚೇರಿಯಿಂದ ಎಸ್ಪಿಗೆದೂರನ್ನು ರವಾನೆ ಮಾಡಲಾಗಿತ್ತು ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಿದ್ದರು ಅದರಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಜನ ನೊಂದವರು ಮೇ.22 ರಂದು ಸೊಸೈಟಿಯ 14 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಮೇ.23 ರಂದು KARNATAKA PROTECTION OF INTEREST DEPOSITIONS EXORBITANT

ACT 2004 (u/s -9) ದಾಖಲಾಗಿದೆ.

 

2021 ರಿಂದ 2024 ರ ವರೆಗೆ ಬ್ಯಾಂಕ್ ನಲ್ಲಿ ಜವಬ್ದಾರಿಯಲ್ಲಿದ್ದ 40 ಕೋಟಿ ರೂಪಾಯಿ ಹಣ (ವಂಚನೆ) ಹಗರಣದ ರೂವಾರಿಗಳಾದ ಬ್ಯಾಂಕ್‌ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಹೆಚ್,ಉಪಾಧ್ಯಕ್ಷ ಸದಾನಂದ.ಎಮ್ ಉಜಿರೆ, ನಿರ್ದೆಶಕರುಗಳಾದ ವಿಶ್ವನಾಥ.ಆರ್.ನಾಯಕ್, ಪ್ರಮೋದ್.ಆ‌ರ್.ನಾಯಕ್‌, ವಿಶ್ವನಾಥ, ಜಗನ್ನಾಥ.ಪಿ, ರತ್ನಾಕರ, ಸುಮ ದಿನೇಶ್ ಉಜಿರೆ, ನಯನ ಶಿವಪ್ರಸಾದ್, ಮೋಹನ್ ದಾಸ್.ಕೆ, ಕಿಶೋ‌ರ್ ಕುಮಾ‌ರ್ ಲಾಯಿಲ, ಬ್ಯಾಂಕ್ ಸಿಬ್ಬಂದಿ ಸರಿತಾ.ಎಸ್ ಮತ್ತು ವಿನೋದ್ ಕುಮಾ‌ರ್.ಸಿ.ಹೆಚ್ ಸೇರಿ ಒಟ್ಟು 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

 

ದೂರು ನೀಡಿದ 13 ಮಂದಿ ನೊಂದವರು:

ದಯಾನಂದ ನಾಯಕ್, ನಿಧೀಶ್.ಡಿ.ನಾಯಕ್, ಶ್ರದ್ಧಾ.ಬಿ,ಮಾಲಿನಿ.ಟಿ.ರಾವ್, ತುಕರಾಮ್ ರಾವ್, ಅಕ್ಷಯಾ.ಟಿ.ರಾವ್, ಅಕ್ಷತಾ ರಾವ್‌, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾ‌ರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಸೇರಿ 13 ಮಂದಿ ನೊಂದವರು ಮುಂದೆ ಬಂದು ದೂರು ನೀಡಿದ್ದಾರೆ.

 

 

Comments are closed.