Amendment Bill: ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ಕಾಯ್ದೆ- 1997’ರ ತಿದ್ದುಪಡಿ ಮಸೂದೆ ರಾಷ್ಟ್ರಪತಿ ಅನುಮೋದನೆಗೆ

Amendment Bill: ಬೆಂಗಳೂರು: ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ- 1997’ರ ತಿದ್ದುಪಡಿಗಾಗಿ ಉಭಯ ಸದನಗಳ ಅನುಮೋದನೆ ಪಡೆಯಲಾಗಿತ್ತು. ಕೆಲವು ಸ್ಪಷ್ಟಿಕರಣ ಕೇಳಿ ಈ ಫೈಲನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಮುಜರಾಯಿ ಇಲಾಖೆಯು ಸ್ಪಷ್ಟನೆಯೊಂದಿಗೆ ಮತ್ತೆ ರಾಜ್ಯಪಾಲರ ಅಂಕಿತಕ್ಕೆ ಮಸೂದೆಯನ್ನು ಕಳುಹಿಸಿತ್ತು.
ಆದರೆ ಇದೀಗ ರಾಜ್ಯಪಾಲರು, ‘ಈ ಮಸೂದೆಯ ಅಂಶಗಳಿಗೆ ಹೈಕೋರ್ಟ್ ತಡೆ ನೀಡಿದೆ. ಜತೆಗೆ ಸಂವಿಧಾನದಲ್ಲೂ ನಿರ್ಬಂಧಗಳಿವೆ. ಹೀಗಾಗಿ ಇದನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸಲಾಗಿದೆ’ ಎಂದು ತಿಳಿಸಿದ್ದು ಪ್ರೆಸಿಡೆಂಟ್ ಟೇಬಲ್ಲಿಗೆ ಫೈಲು ಸಾಗಿದೆ.
ಈ ಮಸೂದೆಯಲ್ಲಿ ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಆದಾಯ ಸಂಗ್ರಹವಾಗುವ ದೇವಾಲಯಗಳ ಆದಾಯದಲ್ಲಿ ಶೇ 10ರಷ್ಟನ್ನು, ₹10 ಲಕ್ಷಕ್ಕಿಂತ ಹೆಚ್ಚು ಮತ್ತು ₹ 1 ಕೋಟಿಗಿಂತ ಕಡಿಮೆ ಸಂಗ್ರಹವಾಗುವ ದೇವಾಲಯಗಳ ಆದಾಯದ ಶೇ 5ರಷ್ಟನ್ನು ‘ಸಾಮಾನ್ಯ ಸಂಗ್ರಹಣಾ ನಿಧಿ’ ವರ್ಗಾಯಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ.
ಈಗ ರಾಜ್ಯಪಾಲರು, ‘ಈ ಮಸೂದೆಯ ಕೆಲ ಅಂಶಗಳಿಗೆ ಹೈಕೋರ್ಟ್ ತಡೆ ನೀಡಿದೆ. ಅಲ್ಲದೆ, ಸಂವಿಧಾನದಲ್ಲೂ ನಿರ್ಬಂಧಗಳಿವೆ. ಹೀಗಾಗಿ ಇದನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸಲಾಗಿದೆ’ ಎಂದು ತಿಳಿಸಿದ್ದಾರೆ.
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಆದಾಯ ಸಂಗ್ರಹವಾಗುವ ದೇವಾಲಯಗಳ ಆದಾಯದಲ್ಲಿ ಶೇ 10ರಷ್ಟು, ₹10 ಲಕ್ಷಕ್ಕಿಂತ ಹೆಚ್ಚು ಮತ್ತು ₹ 1 ಕೋಟಿಗಿಂತ ಕಡಿಮೆ ಸಂಗ್ರಹವಾಗುವ ದೇವಾಲಯಗಳ ಆದಾಯದ ಶೇ 5ರಷ್ಟನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ ವರ್ಗಾಯಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಈಗ ಈ ಮಸೂದೆ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಿದೆ.
Comments are closed.