KSDL: ‘ಮೈಸೂರು ಸ್ಯಾಂಡಲ್ ಸೋಪ್‌’ ರಾಯಭಾರಿಯಾಗಿ ತಮನ್ನಾ ಯಾಕೆ? 4 ಕಾರಣ ಕೊಟ್ಟ ಸರ್ಕಾರ!

Share the Article

KSDL: ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್‌ (KSDL) ಉತ್ಪನ್ನಗಳಿಗೆ ನೂತರ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ (Tamanna Bhatia) ಅವರನ್ನು ನೇಮಕ ಮಾಡಲಾಗಿದೆ. ತಮನ್ನಾ ಬದಲು ಕನ್ನಡದವರನ್ನೇ (Sandalwood) ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಕನ್ನಡ ಪರ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಈಗ ಸರ್ಕಾರ ತಮನ್ನಾ ಅವರನ್ನು ಆಯ್ಕೆ ಮಾಡಲು ನಾಲ್ಕು ಕಾರಣಗಳನ್ನು ನೀಡಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧಿಕೃತ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ನೇಮಕಗೊಂಡಿದ್ದಾರೆ. 2 ವರ್ಷ 2 ದಿನದ ಅವಧಿಗೆ ರಾಯಭಾರಿಯಾಗಲು ನಟಿ ಬರೋಬ್ಬರಿ 6.20 ಕೋಟಿ ಸಂಭಾವನೆ ಪಡೆದಿದ್ದಾರೆ. ಪರಭಾಷೆ ನಟಿ ತಮನ್ನಾ ಆಯ್ಕೆಗೆ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಅಸಮಾಧಾನ ಹೊರಹಾಕಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಈ ಕುರಿತು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದೀಗ ತಮನಾ ಆಯ್ಕೆಯನ್ನು ಸಚಿವ ಎಂಬಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಕನ್ನಡ ಚಲನಚಿತ್ರೋದ್ಯಮದ ಬಗ್ಗೆ KSDL ಗೆ ಗೌರವವಿದೆ ಕೆಲವು ಕನ್ನಡ ಚಲನಚಿತ್ರಗಳು ಸ್ಪರ್ಧೆಯನ್ನು ನೀಡುತ್ತಿವೆ. ಬಾಲಿವುಡ್ ಚಲನಚಿತ್ರಗಳಿಗೂ ಸ್ಪರ್ಧೆಯನ್ನು ನೀಡುತ್ತಿವೆ. ಮೈಸೂರು ಸ್ಯಾಂಡಲ್ ಕರ್ನಾಟಕದಲ್ಲಿ ಉತ್ತಮ ಬ್ರಾಂಡ್. ಕರ್ನಾಟಕ ಮಾರುಕಟ್ಟೆಯಿಂದ ಹೊರಗೆ ಪರಿಚಯಿಸಬೇಕು ಹೀಗಾಗಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಇದಕ್ಕೆ ನಾಲ್ಕು ಕಾರಣಗಳನ್ನು ನೀಡಿದ್ದಾರೆ.

ತಮನ್ನಾ ಆಯ್ಕೆ ಹಿಂದಿನ ಪ್ರಮುಖ ಕಾರಣಗಳು

* ಯಾವುದೇ ನಿರ್ದಿಷ್ಟ ವರ್ಗಕ್ಕೆ ಲಭ್ಯತೆ ಇರುವವರು

* ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ ಇರುವವರು

* ಮುಖ್ಯವಾಗಿ ಬ್ರ್ಯಾಂಡ್, ಉತ್ಪನ್ನಗಳು ನಮ್ಮ ಟಾರ್ಗೆಟ್ ಗ್ರಾಹಕರನ್ನ ತಲುಪುವುದು ಮುಖ್ಯ ಗುರಿ

* ಮಾರ್ಕೆಟಿಂಗ್ ಮಾಡಲು ಫಿಟ್ ಇರುವುದು ಮತ್ತು ಗ್ರಾಹಕರನ್ನ ತಲುಪುವುದು

Comments are closed.