Kasargod: ಕಾಸರಗೋಡು: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದಾರುಣ ಸಾವು!

Share the Article

Kasargod: ಕಾಸರಗೋಡು (Kasargod) ಜಿಲ್ಲೆಯ ಕಾಞಂಗಾಡ್ ಸಮೀಪದ ಮಾಣಿಕ್ಕೋತ್‌ ಎಂಬಲ್ಲಿ ಮಾರ್ಚ್ 22ರ ಸಂಜೆ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮತ್ತೋರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಆತನ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತಪಟ್ಟ ದುರ್ದೈವಿಗಳನ್ನು ಪಾಲೆಕ್ಕಿ ನಿವಾಸಿ ಅಝೀಝ್ ಅವರ ಪುತ್ರ ಮುಹಮ್ಮದ್ ಆಫಾಝ್ (9) ಮತ್ತು ಅದೇ ಪ್ರದೇಶದ ಹೈದ‌ರ್ ಅವರ ಪುತ್ರ ಮುಹಮ್ಮದ್ ಅನ್ವ‌ರ್ (11) ಎಂದು ಗುರುತಿಸಲಾಗಿದೆ.

Comments are closed.