Education: ಜೂನ್ 30ರ ಒಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ ಶಿಕ್ಷಣ ಇಲಾಖೆ!

Education: ಶಾಲಾ ಶಿಕ್ಷಣ (Education) ಇಲಾಖೆಯು ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರ ಒಳಗೆ ಪೂರ್ಣಗೊಳಿಸುವಂತೆ ಮುಖ್ಯ ಶಿಕ್ಷರಿಗೆ ಸೂಚನೆ ನೀಡಿದೆ.

ಕೆಲವು ಮಕ್ಕಳು ಶಾಲೆಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವುದು ಮತ್ತು ಅರ್ಧದಲ್ಲಿಯೇ ಶಾಲೆ ಬಿಡುವ ಮಕ್ಕಳ ಬಗ್ಗೆ ಶಿಕ್ಷಕರು ಶಿಕ್ಷಣ ಸಂಯೋಜಕರ ಜೊತೆ ಸಂಪರ್ಕದಲ್ಲಿದ್ದು ಅಂತಹ ಮಕ್ಕಳನ್ನು ಶಾಲಾ ಮುಖ್ಯ ವಾಹಿನಿಗೆ ಕರೆ ತರಬೇಕು. ಕ್ರಿಸ್ಮಸ್ ಸಂದರ್ಭದಲ್ಲಿ ನೀಡುವ ರಜೆಯನ್ನು ಅಕ್ಟೋಬರ್ ತಿಂಗಳ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಬೇಕು ಎಂದು ಇಲಾಖೆಯೂ ಸೂಚಿಸಿದೆ.
Comments are closed.