Eshwar khandre: ರಾಜ್ಯಾದ್ಯಂತ ಮರಗಳ ಸುತ್ತ 1 ಮೀಟರ್ ಕಾಂಕ್ರೀಟ್ ಹಾಕುವಂತಿಲ್ಲ: ಅರಣ್ಯ ಸಚಿವ ಖಂಡ್ರೆ ಆದೇಶ

Eshwar khandre: ರಾಜ್ಯಾದ್ಯಂತ ಮರಗಳ ಸುತ್ತ ಕಾಂಕ್ರೀಟ್ ಹಾಕಲು ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar khandre) ಮಹತ್ವದ ಆದೇಶವನ್ನು ನೀಡಿದ್ದಾರೆ.
ಮರಗಳ ಸುತ್ತ 1 ಮೀಟರ್ ಕಾಂಕ್ರೀಟ್ ಹಾಕುವಂತಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಕಡೆ ಮರಗಳ ಬುಡಕ್ಕೆ ಕಾಂಕ್ರೀಟ್ ಹಾಕಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಖಂಡ್ರೆ ಈ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಮರಗಳ ಸುತ್ತ ಕಾಂಕ್ರೀಟ್ ಹಾಕಿದ್ದಲ್ಲಿ ಅದನ್ನು ಒಂದು ಮೀಟರ್ ವರೆಗಿನ ಅಂತರದಷ್ಟು ಕಾಂಕ್ರೀಟ್ ತೆರವುಗೊಳಿಸಬೇಕೆಂದು ಆದೇಶಿಸಿದ್ದಾರೆ.
ಮರದ ಬುಡಗಳಿಗೆ ಕಾಂಕ್ರೀಟ್ ಹಾಕುವುದನ್ನು ನಿಲ್ಲಿಸುವಂತೆ ವೃಕ್ಷ ವೈದ್ಯ ವಿಜಯ್ ನಿಶಾಂತ್ ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೆ ಕಾಂಕ್ರೀಟ್ ತೆರವುಗೊಳಿಸುವಂತೆ ಆದೇಶ ಹೊರಡಿಸಲಾಗಿದೆ.
Comments are closed.