Mangaluru: ಜಾವೆಲಿನ್ ನಲ್ಲಿ ಚಿನ್ನದ ಪದಕ ಪಡೆದಡಾ. ಗಿರಿಧರ್ ಸಾಲಿಯಾನ್

Mangaluru: ಮಂಗಳೂರಿನ (Mangaluru) ಡಾ. ಗಿರಿಧರ್ ಸಾಲಿಯನ್ ಇವರು ಮೇ 18 ರಂದು ತೈವಾನ್ ನ ತೈಪೆ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟ 2025 ರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಇವರು ಬೋಧನೆ, ತರಬೇತಿ, ಆಡಳಿತ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗಳಿಗಾಗಿ ಕೇಂದ್ರ ಸರ್ಕಾರದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಿಂದ ಅನುಮೋದಿತ ಭಾರತ ಗೌರವ ರತ್ನ ಸಮ್ಮಾನ್ ಪ್ರಶಸ್ತಿಯನ್ನು ಪಡೆದಿರುವುದು ಮಾತ್ರವಲ್ಲದೆ 2023ರ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಸ್ ನಲ್ಲಿ ಬಂಗಾರದ ಪದಕ, 2023ರ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಸ್ ನಲ್ಲಿ ಬೆಳ್ಳಿ ಪದಕ,ಇದೇ ರೀತಿ ಹಲವಾರು ಪದಕವನ್ನು ಪಡೆದಿದ್ದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ.
Comments are closed.