Mysore: ಲೈಸನ್ಸ್ ಇಲ್ಲದೆ ವಿದೇಶಿ ಬಾತುಕೋಳಿ ಸಾಕಣೆ: ಕಿಲ್ಲಿಂಗ್ ಸ್ಟಾರ್ ದರ್ಶನ್ ಮತ್ತವರ ಪತ್ನಿ ಮೇಲೆ ಕೇಸು ದಾಖಲು!
ಕಿಲ್ಲಿಂಗ್ ಸ್ಟಾರ್ ದರ್ಶನ್ ಜೊತೆ ಈ ಬಾರಿ ಅವರ ಪತ್ನಿಗೂ ಸಂಕಷ್ಟ!


Mysore: ಲೈಸನ್ಸ್ ಇಲ್ಲದೆ ಬೆಲೆಬಾಳುವ ವಿದೇಶಿ ಬಾತುಕೋಳಿಗಳನ್ನು ಸಾಕುತ್ತಿದ್ದ ಕಿಲ್ಲಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಇದೀಗ ಅರಣ್ಯ ಅಧಿಕಾರಿಗಳು ಮೈಸೂರಿನ ಸಿವಿಲ್ ಕೋರ್ಟಿಗೆ ದೂರು ನೀಡಿದ ಘಟನೆ ನಡೆದಿದೆ. ಹೀಗಾಗಿ ಈ ಬಾರಿ ಕಿಲ್ಲಿಂಗ್ ಸ್ಟಾರ್ ನ ದರ್ಶನ್ ಜೊತೆಗೆ ಅವರ ಪತ್ನಿ ವಿಜಯಲಕ್ಶ್ಮೀ ಗೂ ಕೂಡ ಕಂಟಕ ಎದುರಾದಂತಾಗಿದೆ.

ಕಿಲ್ಲಿಂಗ್ ಸ್ಟಾರ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಒಡೆತನದಲ್ಲಿರುವ ಮೈಸೂರಿನ ಟಿ ನರಸೀಪುರದ ಕೆಂಪಯ್ಯನ ದೊಡ್ಡಿಯ ತೂಗುದೀಪ ಫಾರ್ಮ್ ಹೌಸಿನಲ್ಲಿ ಕಿಲ್ಲಿಂಗ್ ಸ್ಟಾರ್ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ, ಕಳೆದ ಎರಡು ವರ್ಷಗಳಿಂದ ಯಾವುದೇ ಲೈಸೆನ್ಸ್ ಇಲ್ಲದೆ ಬೆಲೆಬಾಳುವ ವಿದೇಶಿ ಮಾತು ಕೋಳಿಗಳನ್ನು ಸಾಕುತ್ತಿದ್ದಾರೆನ್ನಲಾಗಿದೆ.
ಈ ಸಂಬಂಧ ಅರಣ್ಯ ಇಲಾಖೆಯವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇದೀಗ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಮೈಸೂರು ಸಿವಿಲ್ ಕೋರ್ಟಿಗೆ ಖಾಸಗಿ ದೂರು ನೀಡಿದ್ದು ಇದರಂತೆ ಜುಲೈ 4ರಂದು ದರ್ಶನ್ ಹಾಗೂ ವಿಜಯಲಕ್ಷ್ಮಿ, ಖುದ್ದಾಗಿ ಕೋರ್ಟಿಗೆ ಹಾಜರಾಗ ಬೇಕೆಂದು ಇದೀಗ ಕೋರ್ಟು ಇಬ್ಬರಿಗೂ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.

Comments are closed.