ತಾಳಿ ಕಟ್ಟಿಸಿಕೊಂಡ ತಕ್ಷಣವೇ ಪರೀಕ್ಷೆಗೆ ಹಾಜರಾದ ವಧು

Chamarajanagara: ಜೀವನದ ಹಲವಾರು ಮುಖ್ಯ ಘಟ್ಟಗಳಲ್ಲಿ ಮದುವೆಯೂ ಒಂದು ಹಾಗೂ ಅದರೊಡನೆ ಶಿಕ್ಷಣವೂ ಕೂಡ ಮುಖ್ಯ. ಶಿಕ್ಷಣ ಎಂದಾಗ ಪರೀಕ್ಷೆಯೂ ಕೂಡ ಮುಖ್ಯವಾಗಿದೆ. ಈ ಎರಡನ್ನೂ ಸಮನಾಗಿ ಕಂಡು ಸಂಭಾಳಿಸಿಕೊಂಡು ಓರ್ವ ವಧುವು ತಾಳಿ ಕಟ್ಟಿಸಿಕೊಂಡ ನಂತರ ಪರೀಕ್ಷೆ ಬರೆಯಲು ಬಂದಿರುವ ವಿಶೇಷ ಘಟನೆಯು ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲದ ನಿವಾಸಿಯಾಗಿರುವ ಮತ್ತು ವಾಸವಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿರುವಂತಹ ಆರ್. ಸಂಗೀತಾ ಅವರು ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಯುವಕನ ಜೊತೆ ಇಂದು (ಮೇ 22) ಸಪ್ತಪದಿ ತುಳಿದಿದ್ದು, ಕೊಳ್ಳೇಗಾಲ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ಜರುಗಿರುತ್ತದೆ. ಹಾಗೂ ತಾಳಿ ಕಟ್ಟಿಸಿಕೊಳ್ಳುತ್ತಿದ್ದಂತೆ ಸಂಗೀತಾ ವಧುವಿನ ವಸ್ತ್ರ ಅಲಂಕಾರದಲ್ಲಿಯೇ ಪರೀಕ್ಷೆಗೆ ಹಾಜರಾಗಿರುವುದು ಮೆಚ್ಚುಗೆಗೆ ಕಾರಣವಾಗಿದೆ.
Comments are closed.