ಕನ್ನಡ ಪರ ತೇಜಸ್ವಿ ಟ್ವೀಟ್: ಕನ್ನಡದ ಹೀರೋಗಳಿಗೆ ಹೇಳೋಕೆ ಗಟ್ಸ್ ಇದೆಯಾ ಎಂದ ಸೋನು ನಿಗಮ್

Bengaluru:ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ಕನ್ನಡ ವಿರೋಧಿ ತನವನ್ನ ವಿರೋಧಿಸಿ ಈಗಾಗಲೇ ಬಹಳಷ್ಟು ಆಗು ಹೋಗುಗಳಾಗಿದ್ದು, ಈ ಕುರಿತಾಗಿ ಮ್ಯಾನೇಜರ್ ವಿರುದ್ಧವಾಗಿ ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ಮಾಡಿದ್ದು, ಇವರ ವಿರುದ್ಧವಾಗಿ ಇದೀಗ ಸೋನು ನಿಗಮ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
ಕಳೆದ 3-4 ದಿನಗಳಿಂದ ಸುದ್ದಿಯಲ್ಲಿರುವ ಈ ವಿಷಯದಲ್ಲಿ ಮ್ಯಾನೇಜರ್ ಕ್ಷಮೆ ಕೋರಿದ್ದರೂ ಕೂಡ ಇದು ತಣ್ಣಗಾಗುವಂತೆ ಕಾಣುತ್ತಿಲ್ಲ. ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ವಿಷಯದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಈ ಬೆನ್ನಲ್ಲೇ ತೇಜಸ್ವಿ ವಿರುದ್ಧವಾಗಿ ಮಾಡಿದಂತಹ ಸೋನು ನಿಗಮ್ ಟ್ವೀಟ್ ಒಂದು ವೈರಲ್ ಆಗಿದೆ.
ಮ್ಯಾನೇಜರ್ ನ ಈ ವರ್ತನೆ ಸಹಿಸಲು ಸಾಧ್ಯವಿಲ್ಲ, ಬ್ಯಾಂಕ್ ಒಂದು ಸಾರ್ವಜನಿಕ ಕ್ಷೇತ್ರವಾಗಿರುವುದರಿಂದ ಅಲ್ಲಿ ಪ್ರಾದೇಶಿಕ ಭಾಷೆಯಲ್ಲಿಯೇ ವ್ಯವಹರಿಸತಕ್ಕದ್ದು, ನಾನು ಅವರುಗಳ ನೇಮಕಾತಿ ಕುರಿತಾಗಿ ಹಲವು ಬಾರಿ ಸಂಸತ್ ನ ಒಳಗೆ ಹಾಗೂ ಹೊರಗೆ ಪ್ರಸ್ತಾಪ ಮಾಡಿದ್ದೇನೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವವರು ಕನ್ನಡದಲ್ಲೇ ಮಾತನಾಡುವುದು ಅಗತ್ಯ ಎಂದು ತೇಜಸ್ವಿ ಟ್ವೀಟ್ ಮಾಡಿದ್ದರು.
ಇನ್ನು ಸಂಸದ ತೇಜಸ್ವಿ ಸೂರ್ಯರ ಈ ಟ್ವೀಟ್ ಗೆ ಸೋನು ನಿಗಮ್ ಸಿಂಗ್ ಕಿಡಿಕಾರಿದ್ದು, ಕನ್ನಡ ಸಿನಿಮಾಗಳನ್ನು ಪ್ಯಾಮ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ, ಹಿಂದಿಗೆ ಡಬ್ ಮಾಡಬೇಡಿ ಇದನ್ನೆಲ್ಲ ಕನ್ನಡದ ಹೀರೋಗಳಿಗೆ ಹೇಳಿ ಗಟ್ಸ್ ಇದೆಯಾ ಎಂದು ಪ್ರತಿಯಾಗಿ ಟ್ವೀಟ್ ಮಾಡಿದ್ದು, ಇತ್ತೀಚೆಗೆ ಕನ್ನಡಿಗರನ್ನು ಕೆಣಕಿ ಬಳಿಕ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಕ್ಷಮೆ ಕೋರಿದ್ದ ಗಾಯಕ ಸೋನು ನಿಗಮ್ ಇದೀಗ ಮತ್ತೆ ಕನ್ನಡ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದ್ದಾರೆ.
Comments are closed.