ಮಳೆಯಿಂದಾಗಿ ಅಡ್ಡಿ: ಮದುವೆಗಾಗಿ ಮಂಟಪ ಬಿಟ್ಟುಕೊಟ್ಟ ಮುಸ್ಲಿಂ ಕುಟುಂಬ

Pune: ಒಂದು ಹಿಂದೂ ಧರ್ಮದ ಮದುವೆ ವೇಳೆಗೆ ಮಳೆ ಬಂದ ಕಾರಣ ಸಪ್ತಪದಿ ಶಾಸ್ತ್ರಕ್ಕಾಗಿ ಮಂಟಪ ಬಿಟ್ಟುಕೊಟ್ಟು ಸೌಹಾರ್ದತೆ ಮೆರೆದ ಮುಸ್ಲಿಂ ಕುಟುಂಬ.

ಹೌದು, ಸಂಸ್ಕೃತಿ ಕವಡೆ ಹಾಗೂ ನರೇಂದ್ರ ಗಲಾಂಡೆ ಅವರ ಮದುವೆ ಸಮಾರಂಭವೂ ಮಂಗಳವಾರ ಸಂಜೆ 6:45 ಕ್ಕೆ ಅಲಂಕಾರನ್ ಲಾನ್ಸ್ ಎಂಬಲ್ಲಿ ನಿಗದಿಯಾಗಿದ್ದು, ಇದೊಂದು ಹೊರಾಂಗಣದಲ್ಲಿ ನಡೆಯುವ ಕಾರ್ಯಕ್ರಮವಾಗಿತ್ತು. ಹಾಗೂ ಪಕ್ಕದ ಒಂದು ಸಭಾಂಗಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಫಾರೂಕ್ ಖಾಜಿಯ ಪುತ್ರನ ಆರತಕ್ಷತೆ ಇರುತ್ತದೆ.
ಮದುವೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಗಿದ್ದು, ಕೆಲವು ಕಾಲ ಮಳೆ ನಿಲ್ಲಬಹುದೆಂದು ಕಾದಿರುತ್ತಾರೆ ಆದಾಗ್ಯೂ ಮಳೆ ನಿಲ್ಲದ ಕಾರಣ ಬೇರೆ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಬಂದಿದ್ದು, ಪಕ್ಕದ ಸಭಾಂಗಣಕ್ಕೆ ಹೋಗಿ ಮದುವೆಗೆ ಸ್ಥಳಾವಕಾಶ ಮಾಡಿಕೊಡಲು ವಿನಂತಿಸಿಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಆ ಮುಸ್ಲಿಂ ಕುಟುಂಬವು ಒಪ್ಪಿ ಮದುವೆಯ ಶಾಸ್ತ್ರಗಳಿಗೆ ಅವಕಾಶ ಮಾಡಿಕೊಟ್ಟಿರುತ್ತದೆ. ಕೊನೆಗೆ 2 ಕುಟುಂಬಗಳು ಒಟ್ಟಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸೌಹಾರ್ದತೆಯನ್ನು ಮೆರೆದಿದ್ದಾರೆ.
Comments are closed.