DK Shivkumar : ನಟಿ ರನ್ಯಾ ರಾವ್ ಗೆ ಪರಮೇಶ್ವರ್ 25 ಲಕ್ಷ ರೂ ಕೊಟ್ಟಿದ್ದಾರೆ – ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

D K Shivkumar : ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ನಟಿ ರನ್ಯಾ ರಾವ್ ಗೆ ಗ್ರಹ ಸಚಿವ ಡಾ. ಜಿ ಪರಮೇಶ್ವರ್ ಅವರು 25 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ.
ಹೌದು, ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ರೇಡ್ ನಡೆದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಪರಮೇಶ್ವರ್ ಜೊತೆ ಮಾತನಾಡಿದ್ದೇನೆ.
ಚಾರಿಟೇಬಲ್ ಟ್ರಸ್ಟ್ ಗಳು ನೆರವು ನೀಡುತ್ತವೆ. ಅದೇ ರೀತಿ ರನ್ಯಾಗೂ ಸಹಾಯ ಮಾಡಿರಬಹುದು. ಮದುವೆ, ಆಸ್ಪತ್ರೆ ಎಂದು ಬಿಲ್ ನೀಡಿರಬಹುದು. ಎಂದು ಡಿಕೆಶಿ ಹೇಳಿದ್ದಾರೆ. ಈ ಮೂಲಕ ರನ್ಯಾಗೆ ಹಣ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ ರನ್ಯಾಗೆ 25 ಲಕ್ಷ ರೂ. ನೀಡಿದ್ದಾರಂತೆ. ಆ ಕುಟುಂಬದವರಿಗೆಂದು ಹಣ ಕೊಟ್ಟಿರಬಹುದು. ಪರಮೇಶ್ವರ್ ಪ್ರಭಾವೀ ವ್ಯಕ್ತಿ. ರನ್ಯಾ ಅಕ್ರಮ ಮಾಡಿದ್ದಕ್ಕೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
Comments are closed.