Yadagiri : ಜೈನ ಸನ್ಯಾಸಿ ದೀಕ್ಷೆ ಪಡೆದ 100 ಕೋಟಿಯ ಒಡೆಯ !!

Yadagiri : ಯಾದಗಿರಿ ತಾಲೂಕಿನ ಸೈದಾಪುರ ನಿವಾಸಿ, 100 ಕೋಟಿ ಒಡೆಯ ದಿಲೀಪ್ ಕುಮಾರ್ ದೋಖಾ ಎನ್ನುವವರು ಜೈನ ದೀಕ್ಷೆ ಪಡೆದಿದ್ದಾರೆ.
ಹೌದು, ಯಾದಗಿರಿಯ 55 ವರ್ಷದ ದಿಲೀಪ್ ಕುಮಾರ್ ದೋಖಾ ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿ ಮೆಡಿಸಿನ್ ಉತ್ಪಾದನಾ ವ್ಯವಹಾರ ಮಾಡುತ್ತಿದ್ದರು. ಅವರು ದಿಲೀಪ್ ಕುಮಾರ್ ದೋಖಾ 14 ವರ್ಷದವರಿದ್ದಾಗಲೇ ಜೈನ ದೀಕ್ಷೆ ಪಡೆಯಲು ಹೋಗಿದ್ದರು. ಪೋಷಕರು ಬೇಡ ಅಂದಿದ್ದಕ್ಕೆ ವಾಪಸ್ಸಾಗಿದ್ದರು. ಆದರೆ ಇದೀಗ ಜೈನ್ ದೀಕ್ಷೆ ಪಡೆದುಕೊಳ್ಳುವ ಮೂಲಕ ಬರೋಬ್ಬರಿ 41 ವರ್ಷದ ಹಿಂದೆ ಮಾಡಲಾಗದ ಕೆಲಸ ಈಗ ಮಾಡಿದ್ದಾರೆ.
ಆ ಮೂಲಕ ಪತ್ನಿ, ಮೂವರು ಹೆಣ್ಣು ಮಕ್ಕಳು ಮಕ್ಕಳು, ನೂರು ಕೋಟಿಗೂ ಹೆಚ್ಚು ಆಸ್ತಿ, ಐಷಾರಾಮಿ ಬಂಗಲೆ, ಕಾರು, ವ್ಯಾಮೋಹದ ಜೀವನ ತ್ಯಜಿಸಿ ಜೈನ ಮುನಿಯಾಗಲು ಹೊರಟಿದ್ದಾರೆ. ಇತ್ತ ಪತ್ನಿ ಕಣ್ಣೀರು ಹಾಕಿದ್ದಾರೆ. ಬೇಡ ಅಂತ ಹೇಳಿದರು ನನನ್ನು ಒಬ್ಬಂಟಿ ಮಾಡಿ ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಜೈನ ದೀಕ್ಷೆ ಪಡೆದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೊನೆಯದಾಗಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬಿಳ್ಕೋಡುಗೆ ನೀಡಲಾಗಿದೆ. ಸೈದಾಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾರೋಟದಲ್ಲಿ ಮೆರವಣಿಗೆ ಮಾಡಿದ್ದಾರೆ.
Comments are closed.