Metro: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೂ ಇಷ್ಟು ಶುಲ್ಕ ನಿಗದಿ !

Share the Article

Metro: ನಮ್ಮ ಮೆಟ್ರೋ (Metro) ನಿಲ್ದಾಣಗಳಲ್ಲಿ ಇನ್ನು ಮುಂದೆ ಶೌಚಾಲಯವು ಉಚಿತವಲ್ಲ. ಹಲವು ನಿಲ್ದಾಣಗಳಲ್ಲಿ ಶುಲ್ಕ ನಿಗದಿ ಪಡಿಸಲಾಗಿದೆ. ಬಿಎಂಆರ್‌ಸಿಎಲ್‌ ನಡೆಗೆ ಪ್ರಯಾಣಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ನಮ್ಮ ಮೆಟ್ರೋ ಆರಂಭವಾದಾಗಿನಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಶೌಚಾಲಯ ಸೌಲಭ್ಯ ನೀಡಲಾಗುತ್ತಿತ್ತು. ಸದ್ಯ ಏಕಾಏಕಿ ದರ ನಿಗದಿ ಮಾಡಿದೆ. ಈ ಬಗ್ಗೆ ಬಿಎಂಆರ್‌ಸಿಎಲ್‌ ಖಾಸಗಿ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಆ ಸಂಸ್ಥೆಯೇ ಮೆಟ್ರೋ ನಿಲ್ದಾಣಗಳ ಶೌಚಾಲಯಗಳನ್ನು ನಿರ್ವಹಣೆ ಮಾಡಲಿದೆ.

ಎಷ್ಟಿದೆ ದರ?

ಮೂತ್ರ ವಿಸರ್ಜನೆಗೆ – 2 ರೂಪಾಯಿ

ಮಲ ವಿಸರ್ಜನೆಗೆ – 5 ರೂಪಾಯಿ

Comments are closed.