ಜಿ ಪರಮೇಶ್ವರ್ ಗೆ 2ನೆ ದಿನವೂ ED ದಾಳಿ: ಶೋಧ ಕಾರ್ಯ ಮುಂದುವರಿಕೆ

Bengaluru: ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಕೇಸ್ ನ ಭಾಗವಾಗಿ ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಬುಧವಾರ ದಾಳಿ ನಡೆಸಿದ್ದು, ಗುರುವಾರ ಕೂಡ ಮುಂದುವರೆದಿರುತ್ತದೆ.
ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು, ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಿದ್ಧಾರ್ಥ ಕಾಲೇಜಿನಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಪ್ರಭಾವಿ ವ್ಯಕ್ತಿಯೊಬ್ಬರ ಸೂಚನೆಯಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಟ್ರಸ್ಟ್ ಮೂಲಕ ರನ್ಯಾ ರಾವ್ ಕ್ರೆಡಿಟ್ ಕಾರ್ಡ್‌ಗೆ 40 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪವಿರುತ್ತದೆ. ಈ ಆಧಾರದ ಮೇಲೆ ಒಟ್ಟು 16 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಾರ್ಚ್ 3 ರಂದು ರನ್ಯಾ ರಾವ್ ಬಂಧನವಾಗಿದ್ದು, 14.2 ಕೆಜಿ ತೂಕದ ಮತ್ತು 12.56 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ರನ್ಯಾ ರಾವ್ ವಿರುದ್ಧ ಸಿಬಿಐ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಬಂಧನ ಆದೇಶ ಹೊರಡಿಸಿರುವುದರಿಂದ ಬಿಡುಗಡೆ ಭಾಗ್ಯ ಇನ್ನು ಲಭ್ಯವಾಗಿಲ್ಲ.
ಇನ್ನೂ 2 ನೆ ದಿನವೂ ಶೋಧ ಕಾರ್ಯ ಮುಂದುವರೆದಿದ್ದು ಇ.ಡಿ ಅಧಿಕಾರಿಗಳಿಗೆ ನಮ್ಮ ಸಂಸ್ಥೆ ಕೂಡ ಗೌರವ, ಸಹಕಾರ ನೀಡುತ್ತೇವೆ. ನಮಗೆ ಕೇಳುವ ಪ್ರಶ್ನೆಗೆ ಸಹಕಾರ ನೀಡುತ್ತೇವೆ. ವಿಚಾರಣೆ ನಡೆಯುತ್ತಿದೆ, ಯಾವುದೇ ಊಹಾಪೋಹಗಳು ಬೇಡ, ಇಡಿ ಏನು ಬೇಕಾದರೂ ಪರಿಶೀಲನೆ ಮಾಡಲಿ,ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
Comments are closed.