ಕಾಮಿಡಿ ಕಿಲಾಡಿ ಮಡೇನೂರು ಮನು ಅರೆಸ್ಟ್

Bengaluru: ಝೀ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಹಲವಾರು ಕಲಾವಿದರನ್ನು ಹುಟ್ಟಿಹಾಕಿದ್ದು, ಹಲವಾರು ಕಿರುತೆರೆ ಹಿರಿತೆರೆ ಮಿಂಚುತ್ತಿದ್ದಾರೆ. ಈ ಪೈಕಿ ಮಡೆನೂರು ಮನು ಕೂಡ ಒಬ್ಬರು. ಇದೀಗ ಅವರ ಮೇಲೆ ಅತ್ಯಾಚಾರದ ಆರೋಪ ಬಂದಿದ್ದು, ಕಾಮಿಡಿ ಕಿಲಾಡಿ ಶೋ ನ ಸಹ ಕಲಾವಿದೆ ಈ ದೂರನ್ನು ನೀಡಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕ್ಕೊಂಡಿದ್ದು, ಇದೀಗ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ಮನು ಅವರನ್ನು ಅರೆಸ್ಟ್ ಮಾಡಿದ್ದಾರೆ.

ಕುಲದಲ್ಲಿ ಕೀಳ್ಯಾವುದೋ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಮನು ನಟಿಸಿದ್ದು, ನಾಳೆ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ತಯಾರಾಗಿತ್ತು. ಇದೇ ವೇಳೆಗೆ ನಾಯಕನ ಕುರಿತಾಗಿ ದೂರು ದಾಖಲಾಗಿ, ಎಫ್ ಐ ಆರ್ ರಿಜಿಸ್ಟರ್ ಆಗಿರುವುದು ಅಚ್ಚರಿಯನ್ನುಂಟು ಮಾಡಿದೆ.
Comments are closed.