Bengaluru : ‘ನಮ್ಮ ಮೆಟ್ರೋ’ದಲ್ಲಿ ಮಹಿಳೆಯರಿಗೆ ಗೊತ್ತಿಲ್ಲದೆ ಫೋಟೋ, ವಿಡಿಯೋ ಚಿತ್ರೀಕರಣ- ಅಶ್ಲೀಲವಾಗಿ ಎಡಿಟ್ ಮಾಡಿ ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್!‌

Share the Article

Bengaluru : ನಮ್ಮ ಮೆಟ್ರೋದಲ್ಲಿ ಓಡಾಡುವ ಮಹಿಳೆಯರ ಫೋಟೋವನ್ನು, ವಿಡಿಯೋವನ್ನು ಅವರಿಗೆ ಅರಿವಿಲ್ಲದೆ ತೆಗೆದು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ (Instagram) ಅಪ್‌ಲೋಡ್‌ ಮಾಡುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿದೆ.

ಹೌದು, “ಬೆಂಗಳೂರು ಮೆಟ್ರೋ ಕ್ಲಿಕ್ಸ್” (@metro_chicks) ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ಗೊತ್ತಾಗಿದ್ದು, ಈ ಕುರಿತು ಅನೇಕರು ನಮ್ಮ ಮೆಟ್ರೋ ಆಡಳಿತ ಬಿಎಂಆರ್‌ಸಿಎಲ್‌ (BMRCL) ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.

ಇಷ್ಟೇ ಅಲ್ಲದೆ 5,605 ಫಾಲೋವರ್ಸ್‌ಗಳನ್ನು ಹೊಂದಿರುವ ಈ ಸೋಶಿಯಲ್‌ ಮೀಡಿಯಾ ಖಾತೆ ಮತ್ತು ಅದರ ಸಂಬಂಧಿತ ಟೆಲಿಗ್ರಾಮ್ ಚಾನೆಲ್ (1,188 ಚಂದಾದಾರರು) 13 ವೀಡಿಯೊಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕೆಲವು “ಫೈಂಡಿಂಗ್‌ ಬ್ಯೂಟಿಫುಲ್‌ ಗರ್ಲ್ಸ್‌ ಇನ್‌ ನಮ್ಮ ಮೆಟ್ರೋ” ಎಂಬಂತಹ ಆತಂಕಕಾರಿ ಶೀರ್ಷಿಕೆಗಳೊಂದಿಗೆ ಹಲವು ಮಹಿಳೆಯರ ವಿಡಿಯೊ ಕ್ಲಿಪ್‌ಗಳನ್ನು ಹೊಂದಿವೆ. ವೀಡಿಯೊಗಳ ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಈ ಕುರಿತು ದೂರುಗಳು ಬಂದ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚವಾಣ್, ಈ ಅಕೌಂಟ್‌ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ತಕ್ಷಣವೇ ಪೊಲೀಸ್ ದೂರು ದಾಖಲಿಸುತ್ತೇವೆ ಎಂದಿದ್ದಾರೆ.

Comments are closed.