Tamilunadu: ‘ನನ್ನ ಗಂಡ ರಾಜಕಾರಣಿಗಳಿಗೆ 20 ವರ್ಷದ ಯುವತಿಯರನ್ನು ಸಪ್ಲೈ ಮಾಡುತ್ತಾನೆ ‘- ಮಹಿಳೆ ಆರೋಪ, ರಾಜ್ಯ ರಾಜಕೀಯದಲ್ಲಿ ಸಂಚಲನ

Share the Article

Tamilunadu : ನನ್ನ ಗಂಡ ರಾಜಕೀಯ ನಾಯಕರುಗಳಿಗೆ 20 ವರ್ಷದ ಯುವತಿಯರನ್ನು ಸಪ್ಲೈ ಮಾಡುತ್ತಾನೆ ಎಂದು ಯುವ ನಾಯಕನ ಪತ್ನಿ ಒಬ್ಬಳು ಗಂಭೀರ ಆರೋಪ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು, ಇಪ್ಪತ್ತು ವರ್ಷದ ಯುವತಿಯೊಬ್ಬಳು ತನ್ನ ಪತಿಯೂ ಆದ ಡಿಎಂಕೆ ಯುವ ಮುಖಂಡ ಸೇವಸೇಯಲ್‌ 20 ವರ್ಷದ ಯುವತಿಯರನ್ನು ರಾಜಕಾರಣಿಗಳಿಗೆ ಪೂರೈಸುತ್ತಾನೆ ಎಂದು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ಆರಕ್ಕೋಣಂ ಜಿಲ್ಲೆಯ ಕಾಲೇಜಿಗೆ ಹೋಗುತ್ತಿರುವ ಈ ಯುವತಿಯ ಆರೋಪ ಇದೀಗ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಯುವತಿ ಆರೋಪ ಏನು?

ತನ್ನ ಪತಿ ದೈವಸೆಯಾಳ್‌ ಡಿಎಂಕೆ ಯುವಘಟಕದ ಉಪ ಕಾರ್ಯದರ್ಶಿಯಾಗಿದ್ದು, ಆತನಿಗೆ 20 ವರ್ಷದ ಯುವತಿಯರನ್ನು ರಾಜಕಾರಣಿಗಳಿಗೆ ಪೂರೈಸುವುದೇ ಕೆಲಸ. ನಾನು ದೂರು ನೀಡಲು ಮುಂದಾದಾಗ ಹತ್ಯೆ ಬೆದರಿಕೆ ಹಾಕಿದ್ದಾನೆ. ಕಾರಿನಲ್ಲೇ ಹಲ್ಲೆ ನಡೆಸಿ, ತಾನು ಸೂಚಿಸಿದ ವ್ಯಕ್ತಿಯೊಂದಿಗೆ ಮಲಗುವಂತೆ ಕಿರುಕುಳ ಕೊಡುತ್ತಾನೆ. ನಾನು ಮನೆಬಿಟ್ಟು ಹೊರಬಾರಲಾಗದ, ಪರೀಕ್ಷೆಯನ್ನೂ ಬರೆಯಲಾಗದ ಸ್ಥಿತಿ ಇದೆ.

ಈ ಕುರಿತು ಹೊರಗೆ ಬಾಯ್ಬಿಟ್ಟರೆ ತನ್ನ ಕುಟುಂಬವನ್ನು ಸುಟ್ಟುಹಾಕುವುದಾಗಿಯೂ ಬೆದರಿಕೆ ಹಾಕಿದ್ದಾನೆ. ನನ್ನ ಫೋನ್‌ ಅನ್ನೂ ಒಡೆದು ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಒಂದು ವೇಳೆ ನೀನು ದೂರುಕೊಟ್ಟರೂ ಏನೂ ಆಗುವುದಿಲ್ಲ. ಪೊಲೀಸರು ನನಗೇ ಬೆಂಬಲ ನೀಡಲಿದ್ದಾರೆ ಎಂದು ಹೇಳುತ್ತಾನೆ. ಆತನಿಗೆ ಶಿಕ್ಷಣ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಾಮೊಝಿ ಜತೆ ಲಿಂಕ್ ಇದೆ ಎಂದೂ ಆರೋಪಿಸಿದ್ದಾಳೆ. ಈತನ ವಿರುದ್ಧ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ತಿಳಿಸಿದ್ದಾಳೆ.

Comments are closed.