ಕೊಲೆಗೆ ಕಾರಣವಾದ ಮಾವಿನಕಾಯಿ ಚಟ್ನಿ, ಅಪ್ರತ್ಯಕ್ಷ ಸಾಕ್ಷಿಯಾದ ಬೆಳ್ಳುಳ್ಳಿ!

Telangana: ಮಾವಿನಕಾಯಿ ಚಟ್ನಿ ಎಂಬ ಚಿಕ್ಕ ವಿಷಯಕ್ಕೆ ಗಂಡ ಹೆಂಡತಿ ಜಗಳ ಮಾಡಿಕೊಂಡಿದ್ದು, ಪತ್ನಿಯನ್ನು ಪತಿಯು ಕತ್ತು ಹಿಸುಕಿ ಕೊಂದಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಮಾವಿನ ಕಾಯಿಯ ಚಟ್ನಿಯ ಜಗಳಕ್ಕೆ ಮತ್ತು ನಂತರದ ಕೊಲೆಗೆ ಬೆಳ್ಳುಳ್ಳಿ ಸಾಕ್ಷಿ ಆಗಿದೆ ಅನ್ನೋದು ವಿಚಿತ್ರವಾಗಿ ಕಾಣಿಸುತ್ತಿದೆ.

ತೆಲಂಗಾಣದ ಪಂಡೆಲ್ಲ ಗ್ರಾಮದ ನಿವಾಸಿ ಸುರ ರಾಜ್ ಕುಮಾರ್ ಈ ಕೃತ್ಯವನ್ನು ಎಸಗಿದ್ದು ಪೊಲೀಸರು ಈತನನ್ನು ಬಂಧಿಸಿರುತ್ತಾರೆ. ಸುರ ಅಂಜಲಿ ಮೃತ ದುರ್ದೈವೆಯಾಗಿದ್ದು, ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಮಾವಿನಕಾಯಿ ಚಟ್ನಿ ಮಾಡಲು ತಯಾರಿ ನಡೆಸುತ್ತಿರುವ ಬೆಳ್ಳುಳ್ಳಿ ಖಾಲಿಯಾಗಿರುವುದಾಗಿ ಅದನ್ನು ಅಂಗಡಿಗೆ ಹೋಗಿ ತನ್ನಿ ಎಂದು ಅಂಜಲಿ ಹೇಳಿದಾಗ, ಪದೇ ಪದೇ ಅಂಗಡಿಗೆ ಹೋಗಲು ಆಗುವುದಿಲ್ಲ ಎಂದು ರಾಜ್ ಕುಮಾರ್ ಹೇಳಿರುತ್ತಾನೆ. ಈ ರೀತಿ ಪುಟ್ಟದಾಗಿ ಶುರುವಾದ ಜಗಳದಲ್ಲಿ ಕೊನೆಗೆ ಕೋಪಗೊಂಡಂತಹ ರಾಜ್ ಕುಮಾರ್ ತನ್ನ ಪತ್ನಿ ಅಂಜಲಿಯನ್ನು ಕುತ್ತಿಗೆ ಹಿಸುಕಿ ಕೊಲ್ಲುವ ತನಕ ಸಾಗಿದೆ ಎಂದು ಎಫ್ ಐ ಆರ್ ನಲ್ಲಿ ದಾಖಲಾಗಿದೆ.
Comments are closed.