ಶಿರೂರು ಗುಡ್ಡಕುಸಿತದಿಂದ ಪಾರಾಗಿದ್ದ ವ್ಯಕ್ತಿ ಸಿಡಿಲಿಗೆ ಬಲಿ

Share the Article

Karawar: ಈ ಹಿಂದೆ ಬಹಳಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಿದ್ದಂತಹ ಶಿರೂರು ಗುಡ್ಡ ಕುಸಿತ ದುರಂತದಿಂದ ಪಾರಾಗಿದ್ದಂತಹ ಓರ್ವ ವೃದ್ಧ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆನು ಇದೀಗ ನಡೆದಿದೆ. ಅವರು ಉತ್ತರ ಕನ್ನಡದ ಅಂಕೋಲ ತಾಲೂಕಿನ ಉಳವರೆಯಲ್ಲಿ ಗ್ರಾಮದಲ್ಲಿ ನಿವಾಸಿಯಾಗಿದ್ದು, ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ.

2024ರ ಜುಲೈ 16 ರಂದು ಅಂಕೋಲದ ಶಿರೂರಿನಲ್ಲಿ ಭೂ ಕುಸಿತವಾಗಿ ಇದರ ಮಣ್ಣು ಗಂಗಾವಳಿ ನದಿಗೆ ಬಿದ್ದು ಪಕ್ಕದಲ್ಲಿದ್ದ ಉಳವರೆ ಗ್ರಾಮಕ್ಕೆ ನದಿ ನೀರು ಅಪ್ಪಳಿಸಿದ್ದು, ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತು ಹಾಗೂ ಈ ದುರಂತದಲ್ಲಿ ಸುಮಾರು 11 ಜನ ಸಾವನ್ನಪ್ಪಿದ್ದರು. ಪ್ರಸಕ್ತ ಮಳೆಗಾಲದ ಸಂದರ್ಭದಲ್ಲಿ ಪುನ: ಗುಡ್ಡ ಕುಸಿದು ಯಾವುದೇ ಅನಾಹುತವಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುತ್ತದೆ.

ಆ ಒಂದು ದುರಂತದಲ್ಲಿ ಸ್ಪಲ್ಪದರಲ್ಲೇ ತಮ್ಮಣ್ಣಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕೃತಿ ವಿಕೋಪದಲ್ಲಿ ಬೀಸುವ ದೊಣ್ಣೆಯಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದರು. ಈ ಬಾರಿ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದಿದ್ದು ಮತ್ತೆ ಪ್ರಕೃತಿ ವಿಕೋಪದಿಂದಲೇ ಬಲಿಯಾಗಿದ್ದಾರೆ.

Comments are closed.