ಮಹಾರಾಷ್ಟ್ರ ಉದ್ಯಮಿಯ ಕಾರು ದರೋಡೆಗೈದ ದಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಯ ಅಧ್ಯಕ್ಷನ ಮನೆ ದಾಳಿ ನಡೆಸಿದ ಕಾರವಾರ ಪೊಲೀಸರು!

Vitla: ಮಹಾರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಕೋಟ್ಯಾಂತರ ರೂಪಾಯಿ ದರೋಡೆ ನಡೆಸಿ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರ ಪೊಲೀಸರು ದಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆಯ ಅಧ್ಯಕ್ಷ ವಿಟ್ಲ ನಿವಾಸಿಯೋರ್ವನ ಮನೆಗೆ ದಾ ಳಿ ನಡೆಸಿದ ಘಟನೆ ಮೊನ್ನೆ ವಿಟ್ಲ ಠಾಣಾ ವ್ಯಾಪ್ತಿಯ ಕಲ್ಲಂಗಳ ಎಂಬಲ್ಲಿ ನಡೆದಿದೆ.

ಪಿ ಡಿ ಎನ್ ಎ ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಯ ದ ಕ ಜಿಲ್ಲಾ ಅಧ್ಯಕ್ಷರಾಗಿ ಸ್ಪೀಕರ್ ಯುಟಿ ಖಾದರ್ ಅವರ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಅಧಿಕಾರ ಸ್ವೀಕರಿಸಿದ್ದನೆಂದು ಹೇಳಲಾಗುತ್ತಿರುವ ಕೇಪು ಗ್ರಾಮದ ಕಲ್ಲಂಗಳ ನಿವಾಸಿ ಮೊಹಮ್ಮದ್ ಹಿಶಾಮ್ ಎಂಬಾತನ ಮನೆಗೆ ಕಾರವಾರ ಪೊಲೀಸರು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಕೆಲವು ಸಮಯಗಳ ಹಿಂದೆ ಕಾರವಾರ ಠಾಣಾ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ತಡೆದು 11 ಜನರ ತಂಡ ಭಾರೀ ದರೋಡೆ ನಡೆಸಿ ಪರಾರಿಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾರವಾರ ಪೊಲೀಸರು ಆರೋಪಿಗಳ ಪೈಕಿ ಎಂಟು ಮಂದಿಯನ್ನು ಬಂಧಿಸಿದ್ದರು. ಈ ಪೈಕಿ ಮೂವರು ಆರೋಪಿಗಳು ಪರಾರಿಯಾಗಿದ್ದರು. ಇದರಲ್ಲಿ ಪ್ರಮುಖ ಆರೋಪಿಯೆ ನ್ನಲಾಗಿರುವ ವಿಟ್ಲ ಬಳಿಯ ಕೇಪು ಗ್ರಾಮದ ಕಲ್ಲಂಗಳ ನಿವಾಸಿ ಮೊಹಮ್ಮದ್ ಹಿಶಾಮ್ ವಿದೇಶಕ್ಕೆ ಪರಾರಿಯಾಗಿದ್ದನೆನ್ನಲಾಗಿದೆ. ಆದರೆ ಇತ್ತೀಚೆಗಷ್ಟೇ ಮರಳಿ ಊರಿಗೆ ಬಂದ ಮೊಹಮ್ಮದ್ ಹಿಶಾಮ್ ವಿಟ್ಲದ ಸರ್ಕಾರಿ ಬಸ್ ನಿಲ್ದಾಣ ಬಳಿಯ ಸಂಕೀರ್ಣದಲ್ಲಿ ತನ್ನ ಸ್ನೇಹಿತರ ಜೊತೆ ಸೇರಿ ಟ್ರಾವೆಲ್ಸ್ ಏಜೆನ್ಸಿ ಕಚೇರಿಯನ್ನು ತೆರೆದಿದ್ದ. ಆದರೆ ಈ ನಡುವೆ ಕೃತ್ಯದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಮೊಹಮ್ಮದ್ ಹಿಶಾಮ್ ಬಂಧನಕ್ಕೆ ಕಾರವಾರ ನ್ಯಾಯಾಲಯ ಸರ್ಚ್ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕಾರವಾರ ಪೊಲೀಸರು ವಿಟ್ಲ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದಾಗ ಆರೋಪಿ ಪತ್ತೆಯಾಗಿರಲಿಲ್ಲ ಹೀಗಾಗಿ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿದ ಪೊಲೀಸರು ವಿವಿಧ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ತೆರಳಿದ್ದಾರೆ ಎನ್ನಲಾಗಿದೆ.
Comments are closed.