Shimogga: ಒಂದು ತಿಂಗಳ ಹಿಂದೆ ಮದುವೆಯಾದ ವರ ಅಪಘಾತದಲ್ಲಿ ಸಾವು

Share the Article

Shimogga: ಬೈಕ್‌ ನಿಯಂತ್ರಣ ತಪ್ಪಿ ಬಿದ್ದು ನವವಿವಾಹಿತ ಸಾವಿಗೀಡಾದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹರೂರು ಗ್ರಾಮದ ಕೆರೆ ಏರಿ ಮೇಲೆ ಸೋಮವಾರ ರಾತ್ರಿ ನಡೆದಿರುವ ಕುರಿತು ವರದಿಯಾಗಿದೆ.

ಸೊರಬ ತಾಲೂಕಿನ ಕುಂಶಿ ಗ್ರಾಮದ ಎಸ್‌.ಆರ್‌.ರವಿ (29) ಮೃತಪಟ್ಟ ಯುವಕ. ಸಾಗರದಿಂದ ಕೂಲಿ ಕೆಲಸ ಮುಗಿಸಿ ಗ್ರಾಮಕ್ಕೆ ಬರುವಾಗ ನಾಯಿಯೊಂದು ಅಡ್ಡ ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಬೈಕ್‌ ಮೋರಿ ಕಟ್ಟೆಗೆ ಡಿಕ್ಕಿ ಹೊಡೆದು ರವಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಮೃತ ರವಿ ಅವರಿಗೆ ಒಂದು ತಿಂಗಳು ಎಂಟು ದಿನದ ಹಿಂದೆಯಷ್ಟೇ ಮದುವೆಯಾಗಿತ್ತು. ಈ ಸಾವಿನಿಂದ ಮನೆ ಮಂದಿ ಕಂಗಾಲಾಗಿದ್ದು, ಗ್ರಾಮದಲ್ಲಿ ಸೂತಕದ ವಾತಾವರಣ ಉಂಟಾಗಿದೆ.

Comments are closed.