ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ ಬೆಂಗಳೂರಿನ SBI ಮ್ಯಾನೇಜರ್

Share the Article

Bengaluru: ಗ್ರಾಹರೊಬ್ಬರು ಕನ್ನಡದಲ್ಲಿ ಮತನಾಡಿ ಎಂದಿದಕ್ಕೆ ಇದು ಇಂಡಿಯಾ ಹಿಂದಿಯಲ್ಲಿಯೇ ಮಾತಾಡುತ್ತೇನೆ, ಕನ್ನಡ ಮಾತನಾಡುವುದಿಲ್ಲ ಎಂದು ಲೇಡಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಧಿಮಾಕು ತೋರಿಸಿ ಮಾತನಾಡಿರುವ ಘಟನೆಯೊಂದು ಬೆಂಗಳೂರು ನಗರ ವಲಯದ ಚಂದಾಪುರದ ಸೂರ್ಯಸಿಟಿ ಎಸ್ ಬಿ ಐ ಬ್ಯಾಂಕ್ ನಲ್ಲಿ ನಡೆದಿದೆ.

ಈ ಹಿಂದೆ ಕೋರಮಂಗಲದ ಹೋಟೆಲ್ ಒಂದರಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹವನ್ನು ಪ್ರದರ್ಶನ ಮಾಡಿದ್ದರ ಬೆನ್ನ ಹಿಂದೆಯೇ ಈ ಘಟನೆ ನಡೆದಿದ್ದು ಇದರ ವಿಡಿಯೋ ಇದೀಗ ಬಹಳ ವೈರಲ್ ಆಗಿ ಕನ್ನಡಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ವಿಡಿಯೋದಲ್ಲಿ ಮ್ಯಾನೇಜರ್ ದರ್ಪದಿಂದ ಮಾತನಾಡಿದ್ದು, ಮುಂದುವರೆದು ಗ್ರಾಹಕ ಇದು ಕರ್ನಾಟಕ ಇಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಆರ್‌ಬಿಐ ನಿಯಮವಿದೆ ಎಂದು ಹೇಳಿದರೂ ಕೂಡ, ಕ್ಯಾರೇ ಎನ್ನದ ಮ್ಯಾನೇಜರ್‌ ಹಿಂದಿಯಷ್ಟೇ ಮಾತನಾಡಿ ಕನ್ನಡ ನಾನು ಯಾವತ್ತೂ ಮಾತಾಡೋದೇ ಇಲ್ಲ (I Never Speek Kannada) ಎಂದು ಹೇಳಿದ್ದಾರೆ. ಆದ್ದರಿಂದ ಆರ್ ಬಿ ಐ ನಿಯಮಕ್ಕೆ ವಿರುದ್ಧವಾಗಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಪರ ಹೋರಾಟಗಾರರು ಎಸ್ ಬಿ ಐ ವಿರುದ್ಧ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಕನ್ನಡವು ಅಧಿಕೃತ ಭಾಷೆಯಾಗಿದ್ದು, ಆರ್‌ಬಿಐ ಮಾರ್ಗಸೂಚಿಗಳು ಬ್ಯಾಂಕ್ ಸಿಬ್ಬಂದಿ, ವಿಶೇಷವಾಗಿ ಗ್ರಾಹಕರೊಂದಿಗೆ ಸಂವಹನ ನಡೆಸುವಾಗ ಕನ್ನಡದಲ್ಲಿ ಸೇವೆಗಳನ್ನು ಒದಗಿಸಬೇಕೆಂದು ಸೂಚಿಸುತ್ತದೆ. ಹಿಂದಿ-ಇಂಗ್ಲೀಷ್ ಜೊತೆಯಲ್ಲಿ ಆಯಾ ಪ್ರದೇಶದ ಪ್ರಾದೇಶಿಕ ಭಾಷೆ ಮಾತನಾಡಬೇಕೆಂಬುದು ಆರ್ ಬಿ ಐ ನ ನಿಯಮವಾಗಿದೆ.

Comments are closed.