Accident: ಸಂಪ್ಯ: ಜಲ್ಲಿ ಹೊತ್ತ ಲಾರಿ ಪಲ್ಟಿ!

Accident: ಜಲ್ಲಿ ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾದ (Accident) ಘಟನೆ ಸಂಪ್ಯ ಸಮೀಪ ಸೋಮವಾರ ಸಂಜೆ ನಡೆದಿದೆ. ಸಂಪ್ಯದಿಂದ ವಳತ್ತಡ್ಕ ರಸ್ತೆಯಲ್ಲಿ ಘಟನೆ ನಡೆದಿದೆ.
ಎದುರಿನಿಂದ ಬಂದ ಬೈಕಿಗೆ ಸೈಡ್ ಕೊಡಲು ಹೋದಾಗ ಘಟನೆ ಸಂಭವಿಸಿದೆ. ರಸ್ತೆ ಕಿರಿದಾಗಿದ್ದು, ರಸ್ತೆ ಬದಿ ಕುಡಿಯುವ ನೀರಿನ ಪೈಪ್ ಲೈನ್”ಗಾಗಿ ಅಗೆದು ಮುಚ್ಚಿದ್ದರು. ಸಣ್ಣದಾಗಿ ಮಳೆಯೂ ಸುರಿಯುತ್ತಿದ್ದ ಪರಿಣಾಮ ಮಣ್ಣು ಸಡಿಲಗೊಂಡಿತ್ತು. ಲಾರಿ ಈ ಮಣ್ಣಿನ ಮೇಲೆ ಚಲಿಸುತ್ತಿದ್ದಂತೆ ಪಲ್ಟಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
Comments are closed.