Alcohol : ಮೇ 21 ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್!!

Alcohol: ಮೇ 21ರಂದು ರಾಜ್ಯಾದ್ಯಂತ ಮದ್ಯ ಮಾರಾಟಗಾರರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾರಣ ಆ ದಿನ ಕರ್ನಾಟಕದದ್ಯಂತ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿದೆ.

ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇದುವರೆಗೂ ಮೂರು ಬಾರಿ ಮದ್ಯದ ಬೆಲೆಯನ್ನು ಏರಿಕೆ ಮಾಡಿ ಸುರಪಾನಪ್ರಿಯರಿಗೆ ಶಾಕ್ ನೀಡಿದೆ. ಇದರೊಂದಿಗೆ ವೈನ್ ಶಾಪ್ಗಳು, ಡಿಸ್ಟಿಲರಿಗಳು, ಮತ್ತು ವೇರ್ಹೌಸ್ಗಳಿಗೆ ಸಂಬಂಧಿಸಿದ ಲೈಸೆನ್ಸ್ ಶುಲ್ಕವನ್ನು ಗಣನೀಯವಾಗಿ ಏರಿಕೆ ಮಾಡಲಾಗಿದೆ. ವಾರ್ಷಿಕ ಲೈಸೆನ್ಸ್ ಶುಲ್ಕವನ್ನು 27 ಲಕ್ಷ ರೂಪಾಯಿಯಿಂದ 54 ಲಕ್ಷ ರೂಪಾಯಿಗೆ ಮತ್ತು ಡಿಸ್ಟಿಲರಿ/ವೇರ್ಹೌಸ್ ಶುಲ್ಕವನ್ನು 45 ಲಕ್ಷ ರೂಪಾಯಿಯಿಂದ 90 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಹೀಗಾಗಿ ಈ ಬೆಲೆ ಏರಿಕೆ ಮತ್ತು ಶುಲ್ಕ ಹೆಚ್ಚಳದಿಂದ ಬೇಸತ್ತಿರುವ ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಶನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್, ಮತ್ತು ಕರ್ನಾಟಕ ಬ್ರೆವರಿ ಆಂಡ್ ಡಿಸ್ಟಿಲರಿ ಅಸೋಸಿಯೇಶನ್ ಸದಸ್ಯರು ಮೇ 21ರಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮದ್ಯ ಮಾರಾಟಗಾರರ ಹೋರಾಟವು ಮೇ 20, 2025ರಿಂದಲೇ ಆರಂಭವಾಗಿದ್ದು, ವೈನ್ ಶಾಪ್ ಮಾಲೀಕರು ಮದ್ಯ ಖರೀದಿಯನ್ನು ಸ್ಥಗಿತಗೊಳಿಸಿದ್ದಾರೆ. ಮೇ 21ರಂದು ರಾಜ್ಯಾದ್ಯಂತ ಯಾವುದೇ ವೈನ್ ಶಾಪ್ನಲ್ಲಿ ಮದ್ಯ ಲಭ್ಯವಿರುವುದಿಲ್ಲ.
Comments are closed.