ಮುಂದಿನ 4-5 ದಿನಗಳಲ್ಲಿ ಕೇರಳದಲ್ಲಿ ಮುಂಗಾರು ಆಗಮನ

Share the Article

New delhi: ಈಗಾಗಲೇ ಮಳೆಯ ಅಬ್ಬರ ಹೆಚ್ಚಾಗಿದ್ದು, ಮುಂದಿನ 4-5 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಕೆರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಯಾವಾಗಲೂ ಜೂನ್ 1ಕ್ಕೆ ಪ್ರವೇಶಿಸುತ್ತದೆ, ಆದರೆ ಈ ಬಾರಿ ಸುಮಾರು ಮೇ 27 ರ ವೇಳೆಗೆ ಆಗಮಿಸಲಿದೆ ಎಂದು ಇಲಾಖೆಯು ತಿಳಿಸಿದ್ದು, 2009 ರ ನಂತರ ಭಾರತದ ಮುಖ್ಯ ಭೂಭಾಗದಲ್ಲಿ ವಾಡಿಕೆಗಿಂತ ಮೊದಲೇ ಮಳೆ ಪ್ರಾರಂಭವಾಗುವುದು ಇದೇ ಮೊದಲು ಎಂದು ಹೇಳಿದೆ.

ಕಳೆದ ವರ್ಷ ಮೇ 30ರಂದು, 2023ರಲ್ಲಿ ಜೂನ್ 8, 2022 ರಲ್ಲಿ ಮೇ 29, ಹಾಗೂ 2021 ರಲ್ಲಿ ಜೂನ್ 3 ರಂದು ಮುಂಗಾರು ಕೇರಳಕ್ಕೆ ಆಗಮಿಸಿತ್ತು.

Comments are closed.