Crime: ಗಾಂಜಾ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆ: ಆರೋಪಿಗಳ ಬಂಧನ!


Crime: ಬೆಳ್ಳಂಜೆ ಗ್ರಾಮ ತುಂಬೆಜಡ್ಡು ಬಳಿ ಗಾಂಜಾ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸಂಬಂಧಪಟ್ಟಂತೆ ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಅಶೋಕರವರು ಕೆಲವೊಂದು ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ತೇಜಸ್, ಪ್ರಜ್ವಲ್,ಪ್ರವೀಣ್ ಇವರನ್ನು ಬಂಧಿಸಿರುವ ಘಟನೆ ಮೇ. 19ರಂದು ನಡೆದಿದೆ.

ಸ್ಥಳದಲ್ಲಿ ರೂಪಾಯಿ 89,000/- ನಗದು ಹಣ , 08 ಮೊಬೈಲ್ ಪೋನ್‌ಗಳು ,07 ಎಟಿಎಂ ಕಾರ್ಡಗಳು, 03 ಸಿಮ್ ಕಾರ್ಡಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

Comments are closed.