ಶಾಲೆಯಲ್ಲಿ ಹಾಜರಿ ಕರೆವಾಗ ‘ಜೈ ಹಿಂದ್’ ಎನ್ನುವಂತೆ ಆದೇಶ ಹೊರಡಿಸಿದ ಮಧ್ಯಪ್ರದೇಶ ಸರ್ಕಾರ!

Madhya pradesh : ಸಾಮಾನ್ಯವಾಗಿ ಶಾಲೆಗಳಲ್ಲಿ ಶಿಕ್ಷಕರು ಹಾಜರಿ ಕರೆಯುವ ವೇಳೆ ಮಕ್ಕಳು ಎಸ್, ಸಾರ್ ಅಥವಾ ಎಸ್. ಮೇಡಂ, ಎಸ್ ಟೀಚರ್ ಮುಂತಾಗಿ ಹೇಳುವುದು ವಾಡಿಕೆಯಾಗಿರುತ್ತದೆ. ಆದರೆ ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಸಲುವಾಗಿ ಮಧ್ಯಪ್ರದೇಶದ ಸರಕಾರವು ಇನ್ನು ಮುಂದೆ ಅಲ್ಲಿನ ಶಾಲೆಗಳಲ್ಲಿ ಶಿಕ್ಷಕರು ಹಾಜರಿ ಕರೆಯುವ ವೇಳೆ ಎಸ್. ಸಾರ್ ಎನ್ನುವುದರ ಬದಲು ‘ಜೈ ಹಿಂದ್’ ಎಂದು ಹೇಳಬೇಕೆಂದು ಕಡ್ಡಾಯವಾಗಿ ಆದೇಶಿಸಿದೆ.

ಭಾರತದಲ್ಲಿ ಇಂದಿಗೂ ಬ್ರಿಟಿಷ್ ಮಾದರಿಯ ಶಿಕ್ಷಣ ಪದ್ಧತಿಯಿದ್ದು, ಇದರ ಮುಂದುವರಿಕೆಯಾಗಿ ಪ್ರಾಥಮಿಕ ಶಾಲಾ ಶಿಕ್ಷಣ ಹಂತಗಳಿಂದಲೇ ಈಗಲೂ ಈ ಬ್ರಿಟಿಷ್ ಮಾದರಿಯ ಶಿಕ್ಷಣ ವ್ಯವಸ್ಥೆಗಳನ್ನೇ ಮುಂದುವರಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ದೈನಂದಿನ ಶಾಲೆ ಆರಂಭವಾಗುವ ಹಂತಗಳಿಂದಲೇ ಅಂದರೆ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕರೆಯುವ ವೇಳೆಯಿಂದಲೇ ಈಗಲೂ ಎಸ್ ಸಾರ್ ಅಥವಾ ಎಸ್ ಮೇಡಂ, ಎಸ್ ಟೀಚರ್ ಎಂದು ಸಂಭೋಧಿಸುವ ಕ್ರಮವಿದೆ.
ಈ ಕಾರಣಕ್ಕಾಗಿ ಮಕ್ಕಳಲ್ಲಿ ದೇಶದ ಬಗ್ಗೆ ಗೌರವ, ದೇಶಾಭಿಮಾನಗಳನ್ನು ಬೆಳೆಸುವ ಸಲುವಾಗಿಯೇ ಪ್ರಾಥಮಿಕ ಶಾಲಾ ಹಂತದಿಂದಲೇ ಮಧ್ಯಪ್ರದೇಶದ ಸರಕಾರವು ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಮುಂದೆ ಹಾಜರಾತಿ ಕರೆಯುವ ವೇಳೆ ಜೈ ಹಿಂದ್ ಎಂದು ಮಕ್ಕಳಿಂದ ಹೇಳಿಸುವಂತೆ ಕಡ್ಡಾಯ ಆದೇಶವನ್ನು ಹೊರಡಿಸಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳೂ ಈ ಆದೇಶವನ್ನು ಪಾಲಿಸುವಂತೆ ಸಂಬಂಧಪಟ್ಟ ಇಲಾಖೆಗಳ ಮೂಲಕ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
Comments are closed.