Tech Tips: ಈ ರೀತಿ WhatsApp ಮೂಲಕ ಕೆಲವೇ ಸೆಕೆಂಡುಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ!

Tech Tips: ವಾಟ್ಸಾಪ್‌ನಲ್ಲಿ ಬ್ಯಾಂಕ್ ಗ್ರಾಹಕರು ಇದೀಗ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಹುದಾಗಿದ್ದು, ಮನೆಯಲ್ಲಿಯೇ ಕುಳಿತು ನಿಮ್ಮ ಅಕೌಂಟ್ ಅಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತಿಳಿಯಬಹುದಾಗಿದೆ.
ವಾಟ್ಸಪ್ ನಲ್ಲಿ ಬ್ಯಾಂಕ್ ಖಾತೆ ಸೇರಿಸುವುದು ಹೇಗೆ?
1) ನಿಮ್ಮ ಮೆಸೇಜ್ ಟೈಪಿಂಗ್ ಬಾಕ್ಸ್ ಪಕ್ಕ ಇರುವ ₹ ಮೇಲೆ ಕ್ಲಿಕ್ ಮಾಡಿ ಅಥವಾ Payments ವಿಭಾಗಕ್ಕೆ ಹೋಗಿ add Payment Method ಹೋಗಿ.
2) ನಂತರ GET STARTED ಅಥವಾ Continue ಮೇಲೆ ಕ್ಲಿಕ್ ಮಾಡಿ
3) ನಿಮ್ಮ ಖಾತೆಯಿರುವ ಬ್ಯಾಂಕ್ ಆಯ್ಕೆ ಮಾಡಿ
4) ಹಾಗೂ ನಿಮ್ಮ ಖಾತೆಯನ್ನು UPI ಪಿನ್ ಬಳಸಿ Verify ಮಾಡಿ
ಬ್ಯಾಂಕ್ ಬ್ಯಾಲೇನ್ಸ್ ಚೆಕ್ ಮಾಡೋದೇಗೆ..?
ವಾಟ್ಸಾಪ್ ಮೂಲಕ ಬ್ಯಾಂಕ್ ಬ್ಯಾಲೇನ್ಸ್ ಚೆಕ್ ಮಾಡಲು 2 ವಿಧಾನಗಳಿದ್ದು, ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ. Payment ಆಯ್ಕೆಯನ್ನು ಟ್ಯಾಪ್ ಮಾಡಿ. ಈಗ, ಪಾವತಿಗಳನ್ನು ಟ್ಯಾಪ್, Payment Methods ಅಡಿಯಲ್ಲಿ, ಸಂಬಂಧಿತ ಬ್ಯಾಂಕ್ ಖಾತೆಯನ್ನು ಟ್ಯಾಪ್ ಮಾಡಿ. ಇಲ್ಲಿ ಖಾತೆಯ ಬ್ಯಾಲೆನ್ಸ್ ವೀಕ್ಷಿಸಿ ಟ್ಯಾಪ್ ಮಾಡಿ ಮತ್ತು ನಿಮ್ಮ UPI ಪಿನ್ ನಮೂದಿಸಿ. ಹಾಗೂ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ.
ಅಥವಾ ಪಾವತಿ ಸಂದೇಶದ ಸ್ಟೀನ್‌ನಲ್ಲಿ ನಿಮ್ಮ ಲಭ್ಯವಿರುವ ಪಾವತಿ ವಿಧಾನವನ್ನು ಟ್ಯಾಪ್ ಮಾಡಿ. ಖಾತೆಯ ಬಾಕಿಯನ್ನು ವೀಕ್ಷಿಸಿ ಟ್ಯಾಪ್ ಮಾಡಿ. ನಿಮ್ಮ WhatsApp ಖಾತೆಗೆ ನೀವು ಬಹು ಖಾತೆಗಳನ್ನು ಲಿಂಕ್ ಮಾಡಿದ್ದರೆ, ಸಂಬಂಧಿತ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ನಿಮ್ಮ UPI ಪಿನ್ ನಮೂದಿಸಿ. ಹಾಗೂ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ.
Comments are closed.