Bengaluru : ಬೆಂಗಳೂರಲ್ಲೊಬ್ಬ ಡಿಫ್ರೆಂಟ್ ಕಳ್ಳ – ಕಳ್ಳತನ ಮಾಡಿ 30 ಮಕ್ಕಳ ಶಾಲಾ ಫೀಸ್ ಕಟ್ಟಿ ಅರೆಸ್ಟ್ ಆದ!!

Share the Article

Bengaluru : ಬೆಂಗಳೂರಿನಲ್ಲಿ ಒಬ್ಬ ವಿಚಿತ್ರ ಕಳ್ಳ ಪತ್ತೆಯಾಗಿದ್ದಾನೆ. ಅಂದರೆ ಈತ ಕಳ್ಳತನ ಮಾಡಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ಶುಲ್ಕ ಪಾವತಿಸುತ್ತಿದ್ದ ಎಂದು ತಿಳಿದುಬಂದಿದೆ. ಇದರ ಹಿನ್ನಲೆಯಲ್ಲಿ ಈ ಆಧುನಿಕ ರಾಬಿನ್ ಹುಡ್ ಕಳ್ಳ ಸೇರಿದಂತೆ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್ ಹೆಂಡತಿ, ಮಕ್ಕಳಿಲ್ಲದೇ ಏಕಾಂಗಿಯಾಗಿದ್ದ. ಒಂಟಿಯಾಗಿದ್ದ ಈತ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ವೇಳೆ ಶಾಲೆಯ ಮಕ್ಕಳು ಫೀಸ್ ಕಟ್ಟಲು ಪರದಾಡುತ್ತಿದ್ದುದ್ದನ್ನು ಗಮನಿಸಿ ಸಾಯುವ ಮುನ್ನ ಕಳ್ಳತನ ಮಾಡಿ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ನಿರ್ಧರಿಸಿದ್ದ. ಇದೇ ವೇಳೆ ಕಷ್ಟದಲ್ಲಿದ್ದ ಸ್ನೇಹಿತರಾದ ಅನಿಲ್ ಮತ್ತು ವಿವೇಕ್ ಅವರನ್ನು ತನ್ನ ಜೊತೆ ಸೇರಿಸಿಕೊಂಡಿದ್ದ.

ಬಳಿಕ ಎಲ್ಲರೂ ಸೇರಿ ಮನೆಗಳಿಗೆ ಕನ್ನ ಹಾಕಿದ್ದು, ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ @ ಜಗ್ಗ ಮತ್ತು ವಿವೇಕ್‌ನ ಸಹಾಯದಿಂದ ಮಾರಾಟ ಮಾಡಿದ್ದಾನೆ. ಅಲ್ಲದೆ 30 ವಿದ್ಯಾರ್ಥಿಗಳ ಪ್ಲೀಸ್ ಅನ್ನು ಕಟ್ಟಿದ್ದಾನೆ. ಇದೀಗ ಆತನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಮತ್ತು ವಿವೇಕ್ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದು, 24 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

Comments are closed.