Jyoti Malhotra : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಪಹಲ್ಗಾಮ್ ದಾಳಿ ನಂಟು – ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ!

Share the Article

ಪಾಕಿಸ್ತಾನ (Pakistan) ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಹರ್ಯಾಣದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ (Jyoti Malhotra) ಬಂಧನಕ್ಕೆ ಒಳಗಾಗಿದ್ದಾಳೆ. ಇದೀಗ ಈಕೆಯ ತೀವ್ರ ವಿಚಾರಣೆ ನಡೆಯುತ್ತಿದೆ. ಈ ನಡುವೆ ಜ್ಯೋತಿ ಮಲ್ಹೋತ್ರಾಗೂ ಕಾಶ್ಮೀರದ ಪಹಲ್ಗಾಮ್ (Pahalgam) ಗಾಳಿಗೂ ನಂಟಿದೆ ಎಂಬ ಸ್ಪೋಟಕ ವಿಚಾರ ಬಹಿರಂಗವಾಗಿದೆ.

ಹೌದು, ಒಂದು ಪಹಲ್ಗಾಮ್ ದಾಳಿಗೂ ಹಾಗೂ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನವಾಗಿರುವ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗು, ನಂಟು ಇದೆ ಎನ್ನುವುದು ಬಹಿರಂಗವಾಗಿದೆ. ಜ್ಯೋತಿ ಜನವರಿ 2025ರಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್ ಗೂ ಭೇಟಿ ನೀಡಿದ್ದಳು. ಪಹಲ್ಗಾಮ್ ಗೆ ಯಾವ ಮಾರ್ಗವಾಗಿ ಬರಬೇಕು? ಬಳಿಕ ಎಲ್ಲಿಗೆ ಭೇಟಿ ನೀಡಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜ್ಯೋತಿ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ವಿವರಿಸಿದ್ದಳು. ಹಾಗಾಗಿ ಇದೀಗ ಪಹಲ್ಗಾಮ್ ದಾಳಿಗೂ ಈಕೆಗೂ ನಂಟಿದೆ ಎನ್ನಲಾಗುತ್ತಿದೆ.

ಇನ್ನಿ ತನಿಖೆ ವೇಳೆ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದಲ್ಲಿ ಹೈ ಪ್ರೊಫೈಲ್ ಪಾರ್ಟಿಗಳಿಗೆ ಹಾಜರಾಗುತ್ತಿದ್ದಳು. ಗುಪ್ತಚರ ಸಂಸ್ಥೆಗಳಲ್ಲದೇ ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಳು ಎಂದು ತಿಳಿದುಬಂದಿದೆ. ಅಲ್ಲದೆ 2023ರಲ್ಲಿ ಪಾಕ್‌ಗೆ ಹೋಗಿದ್ದ ಜ್ಯೋತಿ ಪಾಕ್ ಡ್ಯಾನಿಶ್ ಜೊತೆ ನಿಕಟ ಸಂಬಂಧ ಬೆಳೆಸಿದ್ದಳು. ಅಲ್ಲದೇ ಪಾಕ್ ಗುಪ್ತಚರ ಏಜೆಂಟ್‌ಗಳೊಂದಿಗೆ ಸಹ ಸಂಪರ್ಕ ಹೊಂದಿದ್ದಳು. ‘ಟ್ರಾವೆಲ್ ವಿತ್ ಜೋ’ ಯೂಟ್ಯೂಬ್ ನಡೆಸುತ್ತಿದ್ದ ಜ್ಯೋತಿ ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ ಪಾಕಿಸ್ತಾನ ಪರ ಇರುವ ವಿಷಯಗಳನ್ನು ಅಪ್ಲೋಡ್‌ ಮಾಡುತ್ತಿದ್ದಳು. ಅಲ್ಲದೇ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Comments are closed.