Bhuvaneshwara: ಟೇಬಲ್ನಲ್ಲಿ ಕುಳಿತು ಪುರಿ ಜಗನ್ನಾಥ ದೇಗುಲ ಪ್ರಸಾದ ಸೇವನೆ; ವಿಡಿಯೋ ವೈರಲ್, ಜನರಿಂದ ಭಾರೀ ಆಕ್ರೋಶ

Bhuvaneshwara: ಪುರಿ ಜಗನ್ನಾಥ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಡೈನಿಂಗ್ ಟೇಬಲ್ನಲ್ಲಿ ಕುಳಿತು ಕುಟುಂಬವೊಂದು ಸೇವನೆ ಮಾಡಿದ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರಸಾದವನ್ನು ನೆಲದ ಮೇಲೆ ಕುಳಿತು ಸ್ವೀಕರಿಸಬೇಕು ಎನ್ನುವುದು ಸಾವಿರಾರು ವರ್ಷಗಳ ಸಂಪ್ರದಾಯ.

ಈ ಪ್ರಸಾದ ಸೇವನೆ ಕುರಿತು ವಿಡಿಯೋವೊಂದು ವೈರಲ್ ಆಗಿದೆ. ಅರ್ಚಕರೊಬ್ಬರು ಪ್ರಸಾದ ಬಡಿಸುತ್ತಿದ್ದು, ಹೆಂಗಸರು, ಮಕ್ಕಳು ಸೇರಿ 10ಕ್ಕೂ ಹೆಚ್ಚು ಮಂದಿ ಟೇಬಲ್ನಲ್ಲಿ ಕುಳಿತು ಪ್ರಸಾದ ಸೇವನೆ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ರೀತಿ ಪ್ರಸಾದ ಸೇವಿಸುವುದು ತಪ್ಪು ಎಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹೇಳುವುದು ದಾಖಲಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
Comments are closed.