Mangalore: ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ಸಾವು ಪ್ರಕರಣಕ್ಕೆ ಟ್ವಿಸ್ಟ್

Mangaluru: ಪಂಜಾಬ್‌ನ ಏರೋಸ್ಪೇಸ್ ಎಂಜಿನಿಯರ್ ನಿಗೂಢ ಸಾವಿಗೆ ಟ್ವಿಸ್ಟ್ ದೊರಕಿದೆ. ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಆಕಾಂಕ್ಷ ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರು ತಿಂಗಳಿನಿಂದ ದೆಹಲಿಯಲ್ಲಿ ಸ್ಪೈಸ್ ಜೆಟ್ ಏರೋಸ್ಪೇಸ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಹೆಚ್ಚಿನ ತರಬೇತಿಗಾಗಿ ಜರ್ಮನಿಗೆ ತೆರಳಲು ತಯಾರು ನಡೆಸಿದ್ದ ಆಕಾಂಕ್ಷ ಶೈಕ್ಷಣಿಕ ದಾಖಲೆಗಳನ್ನು ಪಡೆಯಲು ಕಳೆದ ಶುಕ್ರವಾರ ಸಂಜೆ ದೆಹಲಿಯಿಂದ ಅಮೃತಸರಕ್ಕೆ ತೆರಳಿದ್ದಾಳೆ. ಅಲ್ಲಿ ಸ್ನೇಹಿತೆಯ ರೂಂ ನಲ್ಲಿದ್ದಳು ಎನ್ನಲಾಗಿದೆ.
ಶನಿವಾರ ಬೆಳಗ್ಗೆ 9 ಗಂಟೆಗೆ ಸ್ನೇಹಿತ ಕೇರಳ ಮೂಲದ ಯುವಕನ ಜೊತೆ ಬೈಕ್‌ನಲ್ಲಿ ಪಾಗ್ವಾಡ್ ಕಾಲೇಜಿಗೆ ತೆರಳಿದ್ದಳು. 11 ಗಂಟೆಗೆ ಹೆತ್ತವರು ಆಕೆಗೆ ಕರೆ ಮಾಡಿದ್ದಾಳೆ. ಕರೆ ಕಟ್ ಮಾಡಿದ್ದ ಆಕಾಂಕ್ಷ ತಾನು ಕಾಲೇಜಿನಲ್ಲಿರುವುದಾಗಿ ಮೆಸೇಜ್ ಮಾಡಿದ್ದಾಳೆ. ನಂತರ ಎರಡು ಗಂಟೆ ಸುಮಾರಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಲಿಲ್ಲ. ಮೆಸೇಜ್ ಕೂಡಾ ಮಾಡಲಿಲ್ಲ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಪಂಜಾಬ್‌ನ ಜಲಂಧರ್ ಠಾಣಾ ಪೊಲೀಸರು ಆಕಾಂಕ್ಷಳ ತಂದೆಗೆ ಕರೆ ಮಾಡಿದ್ದಾರೆ. ನಿಮ್ಮ ಮಗಳು ನಾಲ್ಕನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾಳೆ. ತಕ್ಷಣ ಬನ್ನಿ ಎಂದು ಹೇಳಿದ್ದಾರೆ.
ಹೆಚ್ಚಿನ ಶಿಕ್ಷಣಕ್ಕೆಂದು ಜರ್ಮನಿಗೆ ತೆರಳಲು ಟ್ರೈ ಮಾಡುತ್ತಿದ್ದಳು ಆಕಾಂಕ್ಷ. ಅಲ್ಲಿ ಆಕೆಗೆ ತರಬೇತಿಗೆ ಸೀಟ್ ದೊರಕಿತ್ತು. ಪಂಜಾಬ್‌ನ ಪಾಗ್ವಾಡ್ ಎಲ್‌ಸಿಯು ಕಾಲೇಜ್‌ನಲ್ಲಿ ಸರ್ಟಿಫಿಕೇಟ್ ಬೇಕೆಂದು ಕರೆ ಮಾಡಿ ಕೇಳಿದಾಗ ಅದಕ್ಕೆ ಕಾಲೇಜಿನವರು ಸರ್ಟಿಫಿಕೇಟ್ ಕಳಿಸಿಕೊಡಲು ಆಗುವುದಿಲ್ಲ. ನೀನೇ ಬಂದು ಹೋಗು ಎಂದು ಹೇಳಿದ್ದರು.
ಹಾಗಾಗಿ ಆಕೆ ದೆಹಲಿಯಿಂದ ಅಲ್ಲಿಗೆ ಹೋಗಿದ್ದಳು. ಕಾಲೇಜಿನವರೇ ಏನಾದರೂ ಮಾಡಿರುವ ಸಾಧ್ಯತೆ ಇದೆ ಎಂದು ಹೆತ್ತವರು ಆರೋಪ ಮಾಡಿದ್ದಾರೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿನ ಅಲ್ಲ. ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದಿರುವ ಕಾರಣ ಹೇಳುವುದರಿಂದ ಕಾಲೇಜಿನವರೇ ಏನೋ ಮಾಡಿದ್ದಾರೆ ಎಂದು ಹೆತ್ತವರು ಆರೋಪ ಮಾಡಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿದ ನಂತರ ಆಕೆಯ ಹೆತ್ತವರು ಕೂಡಲೇ ಧರ್ಮಸ್ಥಳದಿಂದ ವಿಮಾನದಲ್ಲಿ ಪಂಜಾಬ್‌ಗೆ ತೆರಳಿದ್ದಾರೆ. ಅಲ್ಲಿ ತಮ್ಮ ಮಗಳ ಸಾವಿನ ಕುರಿತು ಅನುಮಾನವಿದೆ ಎಂದು ಪ್ರಕರಣ ದಾಖಲು ಮಾಡುವ ಸಾಧ್ಯತೆ ಇದೆ.
Comments are closed.