Subrahmanya: ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ:ಆರೋಪ ಸಾಬೀತು!

Share the Article

Subrahmanya: ಸುಬ್ರಹ್ಮಣ್ಯದಲ್ಲಿ (Subrahmanya) ಕಾಣಿಕೆ ಹುಂಡಿ ಕಳವು ಮಾಡಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಬೀತಾಗಿರುವುದಾಗಿ ವರದಿಯಾಗಿದೆ.

ಆರೋಪಿ ವಿರುದ್ಧ ದಿನಾಂಕ 16.05.2019 ರಂದು ರಾತ್ರಿ 9 ಗಂಟೆ ಸಮಯಕ್ಕೆ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ಸನ್ನಿಧಿಯ ಮುಂಭಾಗದಲ್ಲಿ ಇಟ್ಟಿರುವ ಹುಂಡಿಯಿಂದ ₹1885/- ಮತ್ತು ಅರ್ಧ ಹರಿದ ₹20/- ರ ನೋಟು ಹಣ ಕಳವು ಮಾಡಿದ್ದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯು ಸುಳ್ಯದ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ನಡೆದು ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರಿ ಅರ್ಪಿತರವರು ಆರೋಪಿಯ ಅಪರಾಧ ಸಾಬೀತಾದ ಕಾರಣ ಆತನನ್ನು ದೋಷಿ ಎಂದು ಘೋಷಿಸಿರುತ್ತಾರೆ.

Comments are closed.