ಸುಳ್ಯದ ಸೇಂಟ್ ಬ್ರಿಜೇಡ್ಸ್ ಚರ್ಚ್ ನ ಧರ್ಮಗುರುಗಳಿಗೆ ಅಭಿನಂದನಾ ಮತ್ತು ಬೀಳ್ಕೊಡಿಗೆ ಕಾರ್ಯಕ್ರಮ


Sullia: ಸುಳ್ಯದ ಸೇಂಟ್ ಬ್ರಿಜೇಡ್ಸ್ ಚರ್ಚ್ನ ಧರ್ಮಗುರುಗಳು ಹಾಗೂ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಸೇಂಟ್ ಬೇರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಚಾಲಕರಾಗಿ ಕಳೆದ 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಂತಹ ರೆ.ಪಾ ವಿಕ್ಟರ್ ಡಿಸೋಜ ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದು ಈ ಸಂದರ್ಭದಲ್ಲಿ ಸಂಬಂಧಪಟ್ಟ ಹಲವು ಸಂಸ್ಥೆಗಳು ಕೂಡಿ ಮೇ 18 ರಂದು ಚರ್ಚ್ ಮೆಸ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಬೀಳ್ಕೊಡಿಗೆ ಸಮಾರಂಭ ನಡೆಸಲಾಯಿತು.
ಚರ್ಚ್ ಪಾಲನಾ ಸಮಿತಿ , ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ , ಪೋಷಕ ಸಮಿತಿ, ಕೆಥೋಲಿಕ್ ಸಭೆಯ ಅಧ್ಯಕ್ಷರು ಸದಸ್ಯರು, ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ಸಮಿತಿಯ ಸಮಸ್ತ ಸದಸ್ಯರು, ವೈಸಿಸ್ ಸಮಿತಿ, ಅಲ್ಟರ್ ಬಾಯ್ಸ್ ಮತ್ತು ಗಲ್ಸ್ ಸಮಿತಿ ಸೇರಿದಂತೆ ಅನೇಕ ಸಮಿತಿಗಳ ಪರವಾಗಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದಂತಹ ನವೀನ್ ಮಾಚಾದೋ ಅವರು ಸ್ವಾಗತಿಸಿ ಪ್ರಸ್ತಾವಿಸಿದ್ದು, ಸೇಂಟ್ ಬ್ರಿಜಿಡ್ಸ್ ಶಾಲೆಯ ಮುಖ್ಯ ಶಿಕ್ಷಕಿ ಅಂತೋನಿ ಮೇರಿ, ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ಸೈಟ್ ರೈಮಂಡ್ ಕಾನ್ವೆಂಟ್ ಸುಪಿರಿಯರ್ ಸಿಸ್ಟರ್ ಗ್ರೇಸಿ, ಆಶಿಶಿ ಸದನ ಕಾನ್ವೆಂಟ್ ಸುಪಿರಿಯರ್ ಶಿಶಿಲಿ ಚರ್ಚ್ ವ್ಯಾಪ್ತಿಯ 21 ಆಯೋಗಗಳ ಸಂಚಾಲಕಿ ಕವಿತಾ ಹಾಗೂ ಇನ್ನಿತರರು ನೆರೆದಿದ್ದರು. ಹಾಗೂ ಪೋಷಕರ ಪರವಾಗಿ ಶಶಿಧರ್ ಎಂ ಜೆ ಮತ್ತು ಚರ್ಚ್ ಪರವಾಗಿ ಗಾಡ್ ಫ್ರಿ ಮೊಂತೋರೋ ಹಾಗೂ ನ.ಪಂ. ಸದಸ್ಯರಾದಂತಹ ಡೇವಿಡ್ ದೀರಾ ಕ್ರಾಸ್ತ ಶುಭ ಹಾರೈಸಿದರು.

ಸಮೂಹ ಮಾಧ್ಯಮಗಳ ಪರವಾಗಿ ವ್ಯವಸ್ಥಾಪಕರು ಯಶ್ವಿತ್ ಕಾಳ0ಮನೆ ಮತ್ತು ವರದಿಗಾರ ಷರೀಫ್ ಜಟ್ಟಿಪಳ್ಳ ಅಭಿನಂದಿಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ ವಂದಿಸಿ, ಶಿಕ್ಷಕಿ ಅನಿತಾ ಮಸ್ಕರೇನಶ್ ಕಾರ್ಯಕ್ರಮ ನಿರೂಪಿಸಿದರು.
Comments are closed.