Alchohal: ಮದ್ಯ ಮಾರಾಟಗಾರರಿಗೆ ಶಾಕಿಂಗ್ ನ್ಯೂಸ್! ಮದ್ಯ ಪರವಾನಗಿ ಶುಲ್ಕ ದುಪ್ಪಟ್ಟು ಹೆಚ್ಚಳ!

Share the Article

Alchohal: ರಾಜ್ಯ ಸರ್ಕಾರವು ಮದ್ಯದ (Alchohal) ವ್ಯವಹಾರಗಳಿಗೆ ಸಂಬಂಧಿಸಿದ ವಾರ್ಷಿಕ ಪರವಾನಗಿ ನವೀಕರಣ ಶುಲ್ಕಗಳನ್ನು 100% ಹೆಚ್ಚಿಸಲು ನಿರ್ಧರಿಸಿದೆ. ಈ ಹೆಚ್ಚಳ ಜುಲೈ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಇದು ಡಿಸ್ಟಿಲರಿಗಳು, ಬ್ರೂವರಿಗಳು, ಮದ್ಯದ ಅಂಗಡಿಗಳು, ಬಾರ್ಗಳು, ರೆಸ್ಟೋರೆಂಟ್ಗಳು ಮತ್ತು ಕ್ಲಬ್ಗಳಂತಹ ವಿವಿಧ ಮದ್ಯ ಸಂಬಂಧಿತ ವ್ಯಾಪಾರಗಳ ಮೇಲೆ ಪರಿಣಾಮ ಬೀರಲಿದೆ.

ಹೆಚ್ಚಳದ ವಿವರಗಳು:

ಬ್ರೂವರಿಗಳ ವಾರ್ಷಿಕ ಪರವಾನಗಿ ಶುಲ್ಕ ₹27 ಲಕ್ಷದಿಂದ ₹54 ಲಕ್ಷಕ್ಕೆ (100% ಹೆಚ್ಚಳ).

ಡಿಸ್ಟಿಲರಿಗಳ ಪರವಾನಗಿ ಶುಲ್ಕ ₹45 ಲಕ್ಷದಿಂದ ₹90 ಲಕ್ಷಕ್ಕೆ ಏರಿಕೆ.

ಡಿಸ್ಟಿಲರಿ ಮತ್ತು ಬ್ರೂವರಿ ಬಾಟ್ಲಿಂಗ್ ಘಟಕಗಳ ಪರವಾನಗಿ ₹1 ಲಕ್ಷದಿಂದ ₹2 ಲಕ್ಷಕ್ಕೆ ಹೆಚ್ಚಾಗಲಿದೆ.

ಬಾರ್ಗಳು, ರೆಸ್ಟೋರೆಂಟ್ಗಳು ಮತ್ತು ಕ್ಲಬ್ಗಳ ವಾರ್ಷಿಕ ಗುತ್ತಿಗೆ ಶುಲ್ಕ ₹2 ಲಕ್ಷಕ್ಕೆ ಏರಿಕೆ.

ಬಿಯರ್ ಚಿಲ್ಲರೆ ಮಾರಾಟಗಾರರ ಗುತ್ತಿಗೆ ₹3 ಲಕ್ಷಕ್ಕೆ ಹೆಚ್ಚಾಗಲಿದೆ.

Comments are closed.