Puttur: ವಿದ್ಯಾರ್ಥಿಯಿಂದ ದೈಹಿಕ ಸಂಪರ್ಕ: ವಿದ್ಯಾರ್ಥಿನಿ ಗರ್ಭವತಿ..!?

Share the Article

Puttur: ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಯೋರ್ವ ಸಹಪಾಠಿ ವಿದ್ಯಾರ್ಥಿನಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ಪರಿಣಾಮ ಗರ್ಭವತಿಯಾಗಿರುವ ಪ್ರಕರಣ ಠಾಣೆಯ ಮೆಟ್ಟಿಲೇರಿ ರಾಜಿ ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ.

ಪ್ರೌಢಶಾಲೆಯ ಹಂತದಿಂದಲೇ ಪರಿಚಿತರೆನ್ನಲಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ನಡುವೆ ಪ್ರೇಮವೇರ್ಪಟ್ಟದ್ದು, ನಂತರ ದೈಹಿಕ ಸಂಪರ್ಕಕ್ಕೆ ಬೆಳೆಸುವ ತನಕ ಮುಂದುವರಿದಿದೆ. ಪರಿಣಾಮ ಇದೀಗ ವಿದ್ಯಾರ್ಥಿನಿ ಗರ್ಭವತಿಯಾಗಿದ್ದಾಳೆ.

ವಿದ್ಯಾರ್ಥಿನಿ ಮನೆಯವರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಹಂತಕ್ಕೆ ತಲುಪಿದ್ದು ಬಳಿಕ ಮಾತುಕತೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿನಿಯೊಂದಿಗೆ ಮದುವೆಗೆ ಯುವಕ ಮನೆಯವರು ಒಪ್ಪಿಗೆ ಸೂಚಿಸಿರುವುದಾಗಿ ಹೇಳಲಾಗುತ್ತಿದೆ.

ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಸುದ್ದಿಗಳು ವೈರಲ್‌ ಆಗುತ್ತಿರುವ ಕುರಿತು ವರದಿಯಾಗಿದೆ.

Comments are closed.