Udupi: ಉಡುಪಿ: ಕರ್ತವ್ಯನಿರತ ಪೊಲೀಸ್ ಗೆ ಧಮ್ಕಿ ಹಾಕಿದ ವಕೀಲ: ಪ್ರಕರಣ ದಾಖಲು!!

Udupi: ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ (Udupi) ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿಗೆ ವಕೀಲನೋರ್ವ ಧಮ್ಕಿ ಹಾಕಿ, ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಉಡುಪಿಯ ಕರಾವಳಿ ಜಂಕ್ಷನ್ ಫ್ಲೈ ಓವರ್ ಬಳಿ ನಡೆದಿದೆ.

ಫ್ಲೈ ಓವರ್ ಬಳಿ ಯಾವಾಗಲೂ ವಾಹನ ಸಂಚಾರ ದಟ್ಟಣೆಯಿರುವುದರಿಂದ ಉಡುಪಿ ಸಂಚಾರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ದುಂಡಪ್ಪ ಮಾದವ ಎಂಬವರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಬನ್ನಂಜೆ ಕಡೆಯಿಂದ ಅತ್ತ ಬರುತ್ತಿದ್ದ ವಾಹನವನ್ನು ಹ್ಯಾಂಡ್ ಸಿಗ್ನಲ್ ಮಾಡಿ ನಿಲ್ಲಿಸುತ್ತಿದ್ದರು.
ಆ ಸಂದರ್ಭ ಸ್ಕೂಟರ್ ಸವಾರ ಕೆ. ರಾಜೇಂದ್ರ ಎಂಬಾತ ಯಾಕೆ ವಾಹನವನ್ನು ತಡೆದ್ರಿ. ನಾನು ಅಡ್ವೋಕೇಟ್. ನೀನು ಎಲ್ಲಿಂದಲೋ ಬಂದು ಇಲ್ಲಿ ಕರ್ತವ್ಯ ನಿರ್ವಹಿಸೋ ಅವಶ್ಯಕತೆಯಿಲ್ಲ. ನಮ್ಮ ಜಿಲ್ಲೆಯನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಏಕವಚನದಲ್ಲಿ ಬೈದಿದ್ದಾರೆ. ಅಲ್ಲದೆ ಹಲ್ಲೆ ಕೂಡ ಮಾಡಿದ್ದಾರೆ. ಈ ಬಗ್ಗೆ ದುಂಡಪ್ಪ ಅವರು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Comments are closed.