MP: ಹಲ್ಲು ನೋವಿಗೆ ಮಾತ್ರೆ ಸೇವಿಸಿದ ಮಹಿಳೆ ಸಾವು!!

Share the Article

MP: ಹಲ್ಲು ನೋವುತ್ತಿದ್ದ ಕಾರಣ ಕ್ಲಿನಿಕ್ ನಿಂದ ಮಾತ್ರೆ ತಂದು ಸೇವಿಸಿದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಮಧ್ಯಪ್ರದೇಶದ ಝಬುವಾದಲ್ಲಿ ಜಿಲ್ಲಾ ಕೇಂದ್ರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಧರಂಪುರಿ ಗ್ರಾಮದವರಾದ ರೇಖಾ, ಥಾಂಡ್ಲಾ ಗೇಟ್ ಬಳಿಯ ಮೆಡಿಕಲ್​ಗೆ ಹೋಗಿ ಹಲ್ಲುನೋವಿಗೆ ಔಷಧಿ ಕೇಳಿ ಮಾತ್ರೆಯೊಂದನ್ನು ತಂದಿದ್ದಾರೆ. ಆ ಮಾತ್ರೆ ಸೇವಿಸಿದ ಬೆನ್ನಲ್ಲೇ ಮಹಿಳೆ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಕೂಡ ಬದುಕುಳಿಸಲು ಸಾಧ್ಯವಾಗಿಲ್ಲ.

ಮರಣೋತ್ತರ ಪರೀಕ್ಷೆಯ ಬಳಿಕ ಮಹಿಳೆಯ ಸಾವಿಗೆ ಸಲ್ಫಾಸ್ ಮಾತ್ರೆ ಕಾರಣ ಎಂದು ತಿಳಿದುಬಂದಿದೆ. ಹೌದು, ಮಹಿಳೆ ಮೆಡಿಕಲ್ ಗೆ ಹೋಗಿ ಹಲ್ಲು ನೋವಿನ ಮಾತ್ರ ಕೇಳಿದಾಗ ಮೆಡಿಕಲ್​ನಲ್ಲಿದ್ದ ವ್ಯಕ್ತಿ ಪೇನ್​ ಕಿಲ್ಲರ್ ಬದಲು ಸಲ್ಫಾಸ್ ಮಾತ್ರೆ ನೀಡಿದ್ದಾರೆ ನಂತರ ಮಹಿಳೆಯ ಪತಿ ದೂರು ನೀಡಿದ್ದು, ಅಂಗಡಿಯ ಮಾಲೀಕ ಲೋಕೇಂದ್ರ ಬಾಬೆಲ್ ಎಂಬಾತನನ್ನು ಬಂಧಿಸಲಾಗಿದೆ.

Comments are closed.