Actor Rakshith Shetty: 42 ರ ಹರೆಯದ ನಟ ರಕ್ಷಿತ್‌ ಶೆಟ್ಟಿಗೆ ಕಂಕಣಬಲ ಯಾವಾಗ? ಪಂಜುರ್ಲಿ ದೈವ ಹೇಳಿದ್ದೇನು?

Share the Article

Actor Rakshith Shetty: ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರ ಉಡುಪಿಯ ಅಲೆವೂರು ದೊಡ್ಡಮನೆ ಕುಟುಂಬಸ್ಥರ ಹರಕೆಯ ನೇಮೋತ್ಸವದಲ್ಲಿ ತಂದೆ, ತಾಯಿ ಭಾಗಿಯಾಗಿದ್ದಾರೆ.

ರಕ್ಷಿತ್‌ಗೆ 42 ರ ಹರೆಯ. ರಕ್ಷಿತ್‌ ಪೋಷಕರಿಗೆ ಸಹಜವಾಗಿಯೇ ಮಗ ಬೇಗ ಮದುವೆಯಾಗಲಿ ಎನ್ನುವ ಆಸೆ ಇರುತ್ತದೆ. ಆದರೆ ರಕ್ಷಿತ್‌ಗೆ ಕಂಕಣ ಬಲ ಮಾತ್ರ ಕೂಡಿ ಬಂದಿಲ್ಲ. ಎಲ್ಲರೂ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳುತ್ತಾರೆ. ರಕ್ಷಿತ್‌ ಮಾತ್ರ ಎಲ್ಲಾ ದೈವದ ಇಚ್ಛೆ ಎಂದು ನಕ್ಕು ಸುಮ್ಮನಾಗುತ್ತಾರೆ.

ತಮ್ಮ ಕುಟುಂಬದ ಮನೆಯಲ್ಲಿ ನಡೆದ ಹರಕೆಯ ನೇಮೋತ್ಸವದಲ್ಲಿ ಪಂಜುರ್ಲಿ ದೈವ ನಟ ರಕ್ಷಿತ್‌ ಶೆಟ್ಟಿಗೆ ಏನು ಹೇಳಿತು? ಅವರ ಮುಂದಿನ ಬದುಕು ಯಾವ ದಿಕ್ಕಿನತ್ತ ಸಾಗಲಿದೆ? ಮದುವೆ, ಸಿನಿಮಾ ಎಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ದೊರಕಲಿದೆ.

Comments are closed.