Puttur: ಪುತ್ತೂರು: ಬಸ್ಸಲ್ಲಿ ಬಾಲಕಿ ಜೊತೆ ಅಸಭ್ಯ ವರ್ತನೆ; ವ್ಯಕ್ತಿ ಬಂಧನ

Puttur: ಮೇ 15 ರಂದು ಸಂಜೆ ಪುತ್ತೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಬಸ್ಸಲ್ಲಿ ಸೋಮವಾರಪೇಟೆಯ ಕುಟುಂಬವೊಂದರ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಸಹ ಪ್ರಯಾಣಿಕರು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬೆಟ್ಟಂಪಾಡಿ ನಿವಾಸಿ ಅಬ್ದಲ್ ಕುಂಞ ಎಂಬಾತನೇ ಪ್ರಕರಣದ ಆರೋಪಿ. ಸುಳ್ಯಕ್ಕೆ ಹೋಗುವ ಬಸ್ಸನ್ನು ಈತ ಪುತ್ತೂರಿನಲ್ಲಿ ಹತ್ತಿದ್ದು, ಬಸ್ ಜಾಲ್ಲೂರು ಸಮೀಪ ಆಗುತ್ತಿದ್ದಂತೆ ಸೋಮವಾರಪೇಟೆಯ ಕುಟುಂಬದ ಜೊತೆ ಪ್ರಯಾಣ ಮಾಡುತ್ತಿದ್ದ ಬಾಲಕಿಯ ದೇಹ ಸ್ಪರ್ಶ ಮಾಡಿ ಅನುಚಿತ ವರ್ತನೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಬಾಲಕಿ ಕೂಡಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕುಟುಂಬದವರಿಗೆ ವಿಷಯವನ್ನು ತಿಳಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂಡಲೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಬಸ್ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಿದಾಗ ಆರೋಪಿ ಅಬ್ದುಲ್ ಕುಂಞನನ್ನು ಪೊಲೀಸರು ವಶಕ್ಕೆ ಪಡೆದು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.
Comments are closed.