Udupi: ಚಿಕಿತ್ಸೆಗೆಂದು ಬಂದ 20 ರ ಹರೆಯದ ಯುವತಿ ವೈದ್ಯರಿಂದ ಲೈಂಗಿಕ ಕಿರುಕುಳ; ಬಂಧನ

Udupi: ಚಿಕಿತ್ಸೆಗೆಂದು ಬಂದ ಯುವತಿ ಜೊತೆ ವೈದ್ಯರೊಬ್ಬರು ಅನುಚಿತ ವರ್ತನೆ ಮಾಡಿದ ಆರೋಪವೊಂದು ವರದಿಯಾಗಿದೆ. ಸಾಸ್ತಾನದ ಖಾಸಗಿ ಕ್ಲಿನಿಕ್ ವೈದ್ಯರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಖಾಸಗಿ ಕ್ಲಿನಿಕ್‌ನ ವೈದ್ಯ ಡಾ.ರಾಘವೇಂದ್ರ ಉಪಾಧ್ಯಾಯ (60) ಬಂಧಿತ ಆರೋಪಿ.

20 ವರ್ಷದ ಯುವತಿ ಈಕೆ ಮುಂಬೈ ನಿವಾಸಿ. ಈಕೆ ಸಾಸ್ತಾನದಲ್ಲಿರುವ ತನ್ನ ಸಂಬಂಧಿಕರ ಮನೆಗೆಂದು ಬಂದಿದ್ದು, ಅನಾರೋಗ್ಯಗೊಂಡಿದ್ದರು. ಈಕೆಯನ್ನು ಚಿಕಿತ್ಸೆಗೆಂದು ಡಾ.ಉಪಾಧ್ಯಾಯ ಅವರ ಬಳಿಕ ಕರೆದುಕೊಂಡು ಹೋಗಲಾಗಿದೆ. ಈ ಸಂದರ್ಭದಲ್ಲಿ ವೈದ್ಯರು ಯುವತಿ ಜೊತೆ ಅನುಚಿತ ವರ್ತನೆ ಮಾಡಿದ್ದಾರೆ ಎಂಬ ಆರೋಪ ಬಂದಿದೆ.
ಕೂಡಲೇ ಯುವತಿ ತನ್ನ ಕುಟುಂಬದವರಿಗೆ ಈ ವಿಷಯ ತಿಳಿಸಿದ್ದಾಳೆ. ಸ್ಥಳೀಯರು ಆಕ್ರೋಶಗೊಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಂತರ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ವೈದ್ಯರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ನಂತರ ಕೇಸು ದಾಖಲಸಿದಿ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಲಾಗಿದೆ.
Comments are closed.