Chaithra kundapura: ಸುಳ್ಳು ಆರೋಪಗಳನ್ನು ಮಾಡಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಚೈತ್ರ ಕುಂದಾಪುರ ತಂದೆ ಬಾಲಕೃಷ್ಣ!

Share the Article

Chaithra kundapura: ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ (Chaithra kundapura) ಬಗ್ಗೆ ಸ್ವತಃ ಅವರ ತಂದೆ ಬಾಲಕೃಷ್ಣ ನಾಯ್ಕ ಅವರು ಹಲವು ಆರೋಪ ಮಾಡಿದ್ದು ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮಗಳು ತಮ್ಮನ್ನು ಮದುವೆಗೆ ಕರೆದೇ ಇಲ್ಲ, ಆಕೆ ದೊಡ್ಡ ಕಳ್ಳಿ, ಚೈತ್ರಾ ಅನೇಕರಿಗೆ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಚೈತ್ರಾ ಬಿಗ್ ಬಾಸ್ ಸ್ಪರ್ಧೆ ಗೆ ಹೋಗಿದ್ದ ಮಾಹಿತಿ ತಮಗೆ ಗೊತ್ತೇ ಇರಲಿಲ್ಲ ಎಂದು ಆರೋಪ ಮಾಡಿದ್ರು.

ಇದೀಗ ಬಾಲಕೃಷ್ಣ ಅವರು ಚೈತ್ರಾ ಬಿಗ್ ಬಾಸ್ ಶೋ ಗೆ ಹೋದ ಸಂದರ್ಭದಲ್ಲಿ ಬಾಲಕೃಷ್ಣ ಅವರು ವಿಶ್ ಮಾಡಿದ್ದ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ. ಇತ್ತೀಚೆಗೆ ಮಾಧ್ಯಮಗಳ ಎದುರು ಬಾಲಕೃಷ್ಣ ಅವರು ಚೈತ್ರಾ ಬಿಗ್ ಬಾಸ್ ಶೋ ಗೆ ಹೋಗುವಾಗ ಅಮ್ಮನ ಜೊತೆ ಸೇರಿ ತನ್ನನ್ನು ಮನೆಯಲ್ಲಿ ಕೂಡಿಟ್ಟು ಹೋಗಿದ್ದರು ಎಂದು ಆರೋಪ ಹೊರಿಸಿದ್ದು ಇದು ಸಾಕಷ್ಟು ವೈರಲ್ ಆಗಿತ್ತು. ಮಗಳಾಗಿ ಈ ರೀತಿ ಮಾಡಿದ್ದು ಎಷ್ಟು ಸರಿ ಎಂಬ ನೈತಿಕ ಪ್ರಶ್ನೆ ಚೈತ್ರಾಗೆ ಎದುರಾಗಿದ್ದು ಆದರೆ, ಚೈತ್ರಾ ಈ ವಿಚಾರವನ್ನು ಅಲ್ಲಗಳೆದಿದ್ದರು.

ಆದರೆ ಇದೀಗ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಬಾಲಕೃಷ್ಣ ಅವರು ನೀಡಿದ್ದ ಸಂದರ್ಶನದ ವಿಡಿಯೋದಲ್ಲಿ, ನಿಮ್ಮ ಮಗಳು ಬಿಗ್ ಬಾಸ್ ಗೆ ಹೋಗಿದ್ದು ಎಷ್ಟು ಖುಷಿ ಇದೆ’ ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ್ದ ಅವರು, ‘ತುಂಬ ಖುಷಿ ಆಗ್ತಿದೆ. ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಡ್ತಿದ್ದಾಳೆ. ಹಾಗೆ ನಡೆಸಿಕೊಡಲಿ’ ಎಂದು ಖುಷಿಯಿಂದ ಹಾರೈಸಿದ್ದರು. ಆದರೆ, ಈಗ ಚೈತ್ರಾ ಬಿಗ್ ಬಾಸ್ ಮನೆಗೆ ಹೋದ ವಿಚಾರವೇ ಗೊತ್ತಿರಲಿಲ್ಲ ಎನ್ನುತ್ತಿದ್ದಾರೆ.

Comments are closed.