Belthangady: ಬೆಳ್ತಂಗಡಿ: ಮದುವೆ ಔತಣ ಕೂಟದ ಊಟ: ಹಲವರು ಅಸ್ವಸ್ಥ:ಮಹಿಳೆ ಸಾವು!

Share the Article

Belthangady: ಮದುವೆ ಕಾರ್ಯಕ್ರಮವೊಂದರಲ್ಲಿ ಆರತಕ್ಷತೆ ಔತಣ ಕೂಟದಲ್ಲಿ ಊಟ ಮಾಡಿದ ನಂತರ ವರ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು ಈ ಪೈಕಿ ಮಹಿಳೆಯೊಬ್ಬರು ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು 5 ಮಂದಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳ್ತಂಗಡಿ (Belthangady) ತಾಲೂಕು ಬಂದಾರು ಗ್ರಾಮದ ಮಾಲೆಸರ ಎಂಬಲ್ಲಿನ ನಿವಾಸಿ ಕಮಲ ಎಂಬವರು ಮದುವೆಯ ಆರತಕ್ಷತೆಯ ಊಟ ಮಾಡಿದ ಮೇಲೆ ವಾಂತಿ ಭೇದಿಯೊಂದಿಗೆ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ವೆನ್ಹಾಕ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಇದೀಗ ಮೃತಪಟ್ಟಿದ್ದಾರೆ.

ಬಂದಾರು ಕೊಪ್ಪದಡ್ಕ ಸಮೀಪದ ಮನೆಯಲ್ಲಿ ಮದುವೆಯ ಮರುದಿನ ನಡೆದ ಆರತಕ್ಷತೆ ಔತಣ ಕೂಟದಲ್ಲಿ ಪಾಲ್ಗೊಂಡು ಮಾಂಸಾಹಾರದ ಭೋಜನ ಸೇವಿಸಿದ ಬೆನ್ನಲ್ಲೇ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಮಂದಿ ವಾಂತಿ ಭೇದಿ ಮತ್ತಿತರ ರೀತಿಯಲ್ಲಿ ಅಸ್ವಸ್ಥರಾಗಿ ಮಂಗಳೂರು ವೆನ್ಲಾಕ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

Comments are closed.