Udupi: ಉಡುಪಿಯಲ್ಲಿ ಶೌಚಾಲಯಕ್ಕೆ ಹೋಗಬೇಕೆಂದು ಕೇಳಿ ಮಗು ಕಳ್ಳತನಕ್ಕೆ ಯತ್ನ!

Udupi: ಶೌಚಾಲಯಕ್ಕೆ ಹೋಗಬೇಕೆಂದು ಕೇಳಿ ಮನೆಯೊಳಗೆ ನುಗ್ಗಿದ ಅಪರಿಚಿತ ಬುರ್ಖಾಧಾರಿ ಮಹಿಳೆಯೊಬ್ಬರು ಮಗುವಿನ ಕಳ್ಳತನಕ್ಕೆ ಯತ್ನಿಸಿದ ಘಟನೆ ಉಡುಪಿಯ (Udupi) ಬೆಳಪು ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ನಡೆದಿದೆ.
ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ. ತಾಯಿ ಮಗುವನ್ನು ಬಚಾವ್ ಮಾಡಲು ಓಡಿದಾಗ ಅವರಿಗೆ ಚೂರಿ ಇರಿದು ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು ಉಡುಪಿಯ ಜನತೆ ಘಟನೆಯಿಂದ ಆತಂಕಕ್ಕೊಳಗಾಗಿದ್ದಾರೆ.
ಮೊಹಮ್ಮದ್ ಅಲಿ ಎಂಬವರ ಮನೆಗೆ ಬುರ್ಖಾಧಾರಿ ಮಹಿಳೆಯರು ಟಾಯ್ಲೆಟ್ ಗೆ ಹೋಗಬೇಕು ಎಂದು ಕೇಳಿ ಮನೆಯೊಳಗೆ ನುಗ್ಗಿ ತೊಟ್ಟಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಯತ್ನಿಸಿದ್ದಾರೆ.
ಆಗ ಚೂರಿ ಇರಿದು ಮಹಿಳೆಯರು ಪರಾರಿಯಾಗಿದ್ದಾರೆ. ಅನುಮಾನಸ್ಪದ ರೀತಿಯಲ್ಲಿ ನಡೆದಾಡುವ ಈ ಮಹಿಳೆಯರು ಕಂಡುಬಂದಲ್ಲಿ ತಕ್ಷಣ ಶಿರ್ವ ಠಾಣೆ 9480805450ಗೆ ತಿಳಿಸಲು ಮನವಿ ಮಾಡಲಾಗಿದೆ.
Comments are closed.