Bengaluru: ಅಪ್ರೆಂಟಿಸ್(ಶಿಶಿಕ್ಷು) ತರಬೇತಿಗೆ ಅರ್ಜಿ ಆಹ್ವಾನ!

Share the Article

Bengaluru: ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್, ಬೆಂಗಳೂರು ಇವರು 12 ತಿಂಗಳುಗಳ ಅಪ್ರೆಂಟಿಸ್(ಶಿಶಿಕ್ಷು) ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿಯೊಂದಿಗೆ ಐಟಿಐ ವಿಭಾಗದ ಫಿಟ್ಟರ್, ಟರ್ನರ್, ಮೆಷಿನಿಷ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಕಾರ್ಪೆಂಟರ್, ಫೌಂಡ್ರಿಮೆನ್, ಶೀಟ್ ಮೆಟಲ್‍ವರ್ಕರ್, ಟೂಲ್ ಅಂಡ್ ಡೈ ಮೇಕರ್, ಸಿಎನ್‍ಸಿ ಪ್ರೋಗ್ರಾಮರ್ ಕಮ್ ಆಪರೇಟರ್, ಮೆಕಾನಿಕ್ ರೆಫ್ರಿಜರೇಷನ್ ಮತ್ತು ಏರ್ ಕಂಡಿಷ್ನಿಂಗ್ ಟ್ರೇಡ್‍ನಲ್ಲಿ ತೇರ್ಗಡೆ ಹೊಂದಿರಬೇಕು.

ತರಬೇತಿ ಅವಧಿಯಲ್ಲಿ ಸರ್ಕಾರಿ ನಿಯಮಾನುಸಾರ ಸ್ಟೈಫಂಡ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಜೂನ್, 02 ಕೊನೆಯ ದಿನವಾಗಿದೆ. ನಿಗಧಿತ ಅರ್ಜಿ ನಮೂನೆಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಪ.ಜಾತಿ, ಪ.ಪಂಗಡ, ಓಬಿಸಿ, ಅಂಗವಿಕಲ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಮತ್ತು ಪಾನ್‍ಕಾರ್ಡ್ ಜೆರಾಕ್ಸ್ ಪ್ರತಿ, ಎನ್‍ಟಿಸಿ ಪ್ರಮಾಣ ಪತ್ರ ಮತ್ತು ಒಂದು ಪಾಸ್‍ಪೋರ್ಟ್ ಭಾವಚಿತ್ರ ಸಲ್ಲಿಸಬೇಕು.

ಅಭ್ಯರ್ಥಿಯು https://apprenticeshipindia.gov.in/candidate-registration ಈ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ನೋಂದಣಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕು.

ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಡಿಕೇರಿ ಇವರನ್ನು ಖುದ್ದಾಗಿ ಅಥವಾ ದೂ.ಸಂ.08272-225851, 9449692691 ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ ಅವರು ತಿಳಿಸಿದ್ದಾರೆ.

Comments are closed.